ರಾಷ್ಟ್ರಪತಿಯವರಿಂದ ವಿಶ್ವ ಭಾರತಿ ವಿವಿ ಉಪಕುಲಪತಿ ವಜಾ
ವಿಶ್ವಭಾರತಿ ವಿಶ್ವ ವಿದ್ಯಾನಿಲಯದ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತಿರುವ ಉಪ ಕುಲಪತಿ...

Published On :
ನವದೆಹಲಿ: ವಿಶ್ವಭಾರತಿ ವಿಶ್ವ ವಿದ್ಯಾನಿಲಯದ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತಿರುವ ಉಪ ಕುಲಪತಿ ಸುಶಾಂತ ದಾಸ್‌ಗುಪ್ತ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಜಾಗೊಳಿಸಿದ್ದಾರೆ.
ವಿಶ್ವಭಾರತಿ ಉಪಕುಲಪತಿ ಅವರನ್ನು ವಜಾಗೊಳಿಸಲು ಹೆಚ್‌ಆರ್‌ಡಿ ಸಚಿವಾಲಯ ಶಿಫಾರಸು ಮಾಡಿತ್ತು. ಇದಕ್ಕೆ ಅಟರ್ನಿ ಜನರಲ್ ಬೆಂಬಲ ವ್ಯಕ್ತಪಡಿಸಿತ್ತು.
ಒಂದೇ ಸಮಯದಲ್ಲಿ ವಿಶ್ವಭಾರತಿಯಿಂದ ಸಂಬಳ ಹಾಗೂ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ (ಜೆಎನ್‌ಯು) ನಿಂದ ಪಿಂಚಣಿ ಪಡೆಯುವ ಮೂಲಕ ದಾಸ್ ಗುಪ್ತ ನಿಯಮ ಉಲ್ಲಂಘನೆ ಮಾಡಿದ್ದರು.
ಅದೇ ವೇಳೆ ಅಕ್ರಮವಾಗಿ ಪರೀಕ್ಷಾ ನಿಯಂತ್ರಕರನ್ನು ನೇಮಕ ಮಾಡುವ ಮೂಲಕ ದಾಸ್‌ಗುಪ್ತ ಭ್ರಷ್ಟಾಚಾರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರನ್ನು ವಜಾಗೈಯ್ಯಲಾಗಿದೆ.
2011ರಲ್ಲಿ ನೇಮಕವಾಗಿದ್ದ ದಾಸ್‌ಗುಪ್ತ ಅವರಿಗೆ ಉಪಕುಲಪತಿ ಸ್ಥಾನದ ಜವಾಬ್ದಾರಿ ಅವಧಿ ಇನ್ನೂ ಒಂದು ವರ್ಷವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


