ಅಸ್ಸಾಂನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಸೇನೆ
ಅಸ್ಸಾಂ ಲೋಹಿತ್ ಜಿಲ್ಲೆಯಲ್ಲಿ ಸೇನಾ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ನಾಲ್ವರು ಉಗ್ರನ್ನು ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದೆ...

Published On :
ಕೋಲ್ಕತಾ: ಅಸ್ಸಾಂ ಲೋಹಿತ್ ಜಿಲ್ಲೆಯಲ್ಲಿ ಸೇನಾ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ನಾಲ್ವರು ಉಗ್ರನ್ನು ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಉಗ್ರರು ಅಡಗಿಕುಳಿತಿದ್ದಾರೆಂಬ ಮಾಹಿತಿ ತಿಳಿದ ಕೂಡಲೇ ಸೇನಾ ಸಿಬ್ಬಂದಿಗಳು ಮಂಗಳವಾರ ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ನಾಲ್ಕು ಉಗ್ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಹತ್ಯೆಯಾದ ನಾಲ್ವರು ಉಗ್ರರಲ್ಲಿ ಮೂವರು ಎನ್ಎಸ್ ಸಿಎನ್ (ಕೆ)ಗೆ ಸೇರಿದವರಾಗಿದ್ದು, ಓರ್ವ ಉಗ್ರ ಉಲ್ಫಾ ಸಂಘಟನೆಗೆ ಸೇರಿದವನಾಗಿದ್ದೇನೆಂದು ಪೊಲೀಸರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಇದರಂತೆ ಸೇನಾ ಸಿಬ್ಬಂದಿಗಳು ಹತ್ಯೆಯಾದ ಉಗ್ರರಿಂದ 2 ಪಿಸ್ತೂಲ್ ಮತ್ತು 1 ಎಕೆ-56 ರೈಫಲ್ ನ್ನು ವಶಕ್ಕೆ ಪಡೆದುಕೊಂದು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


