ದೇಶ

ಶನಿ ಶಿಂಗಣಾಪುರ ವಿವಾದ: ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಕೊಲೆ ಬೆದರಿಕೆ

ಶನಿ ಶಿಂಗಣಾಪುರ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ನಾಯಕಿ ತೃಪ್ತಿ ದೇಸಾಯಿ ಅವರಿಗೆ ಕೊಲೆ ಬೆದರಿಕೆಯೊಂದು ಬಂದಿರುವುದಾಗಿ ಶನಿವಾರ ತಿಳಿದುಬಂದಿದೆ...

ಶನಿ ಶಿಂಗಣಾಪುರ ವಿವಾದ: ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಕೊಲೆ ಬೆದರಿಕೆ
ಶನಿ ಶಿಂಗಣಾಪುರ ವಿವಾದ: ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಕೊಲೆ ಬೆದರಿಕೆ
Published On :
ಮುಂಬೈ: ಶನಿ ಶಿಂಗಣಾಪುರ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ನಾಯಕಿ ತೃಪ್ತಿ ದೇಸಾಯಿ ಅವರಿಗೆ ಕೊಲೆ ಬೆದರಿಕೆಯೊಂದು ಬಂದಿರುವುದಾಗಿ ಶನಿವಾರ ತಿಳಿದುಬಂದಿದೆ. 
ಅಹ್ಮದ್ ನಗರದ ಅಂಚೆಕಚೇರಿ ಮುದ್ರೆ ಹೊಂದಿರುವ ಪತ್ರವೊಂದು ಶುಕ್ರವಾರ ಬಂದಿದ್ದು, ಪತ್ರದಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯದಿದ್ದರೆ ನೀನೂ ಕೂಡ ಡಾ.ದಾಭೋಲ್ಕರ್ ಅವರ ದಾರಿಯನ್ನು ಹಿಡಿಯಬೇಕಾಗುತ್ತದೆ ಎಂದು ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ತೃಪ್ತಿ ದೇಸಾಯಿ ಹೇಳಿಕೊಂಡಿದ್ದಾರೆ. 
ಈ ಹಿಂದೆ ಖ್ಯಾತ ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ನಂತರ ಗೋವಿಂದ ಪನ್ಸಾರೆ ಅವನ್ನು ಹತ್ಯೆ ಮಾಡಲಾಗಿತ್ತು. ಕರ್ನಾಟಕದಲ್ಲೂ ವಿಚಾರವಾದಿ ಡಾ.ಎಂ.ಎಂ.ಕಲಬುರಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದಲ್ಲದೆ ಸಾಮಾಜಿಕ ಕಾರ್ಯಕರ್ತರಾಗಿದ್ದ ಭರತ ಪಾಠಂಕರ್, ಸಾಹಿತಿ ಶ್ರೀಪಾಲ್ ಸಬ್ನೀಸ್ ಸೇರಿದಂತೆ ಇನ್ನಿತರೆ ವಿಚಾರವಾದಿಗಳಿಗೆ ಬೆದರಿಕೆ ಕರೆಗಳು ಬಂದಿದ್ದವು. ಇದೀಗ ನನಗೂ ಈ ರೀತಿಯ ಬೆದರಿಕೆ ಕರೆ ಬಂದಿದೆ. 
ಬೆದರಿಕೆ ಹಾಕುವವರು ಧೈರ್ಯವಿದ್ದರೆ ನನ್ನ ಎದುರು ನಿಂತು ಬೆದರಿಕೆ ಹಾಕಬೇಕು. ನನ್ನೆದರು ನಿಂತು ಅಭಿಪ್ರಾಯ ತಿಳಿಸಬೇಕು. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮಗೆ ಹಕ್ಕಿದೆ. ಇತರರಿಗೆ ಹೆದರಿ ಬದುಕ ಜೀವನ ನಮಗೆ ಬೇಕಿಲ್ಲ. ದೇವಸ್ಥಾನ ಪ್ರವೇಶ ನಮ್ಮ ಹಕ್ಕು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.