ದೇಶ

ಹೋರಾಟ ಕೈಬಿಡಲು ರು.1,200 ಕೋಟಿ ಆಮಿಷವೊಡ್ಡಿತ್ತು ಬಿಜೆಪಿ: ಹಾರ್ದಿಕ್ ಪಟೇಲ್

ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯುವಂತೆ ಗುಜರಾತ್ ಸರ್ಕಾರ ನನಗೆ ರು.1,200 ಕೋಟಿ ಆಮಿಷವನ್ನು ನೀಡಿತ್ತು ಎಂದು ಪಟೇಲ್ ಸಮುದಾಯದ ಹೋರಾಟಗಾರ...

ಹೋರಾಟ ಕೈಬಿಡಲು ರು.1,200 ಕೋಟಿ ಆಮಿಷವೊಡ್ಡಿತ್ತು ಬಿಜೆಪಿ: ಹಾರ್ದಿಕ್ ಪಟೇಲ್
ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)
Published On :
ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯುವಂತೆ ಗುಜರಾತ್ ಸರ್ಕಾರ ನನಗೆ ರು.1,200 ಕೋಟಿ ಆಮಿಷವನ್ನು ನೀಡಿತ್ತು ಎಂದು ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. 
ಪ್ರಸ್ತುತ ಸೂರತ್ ನಲ್ಲಿರುವ ಲಜ್ಪೋರ್ ಜೈಲಿನಲ್ಲಿರುವ ಹಾರ್ದಿಕ್ ಪಟೇಲ್ ಅವರು, ತಂದೆ ಭರತ್ ಪಟೇಲ್ ಗೆ ಬರೆದಿರುವ ಪತ್ರವೊಂದರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು, ಈ ಪತ್ರದ ಕೆಲವು ಪ್ರತಿಗಳು ಶುಕ್ರವಾರ ಸಂಜೆ ಬಿಡುಗಡೆಗೊಂಡಿದೆ. ಪತ್ರದಲ್ಲಿ ಹಾರ್ದಿಕ್ ಗುಜರಾತ್ ಸರ್ಕಾರ ಇಬ್ಬರು ವ್ಯಕ್ತಿಗಳು ಮೂರು-ನಾಲ್ಕು ದಿನಗಳ ಹಿಂದೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಇಬ್ಬರಲ್ಲಿ ಒಬ್ಬರು ಐಎಎಸ್ ಅಧಿಕಾರಿಯಾಗಿದ್ದು, ಅವರೇ ನನಗೆ ಈ ರೀತಿಯ ಆಮಿಷವನ್ನು ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. 
ಆದರೆ, ಈ ಆಮಿಷವನ್ನು ನಾನು ತಿರಸ್ಕರಿಸಿದ್ದು, ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವನ್ನು ಮುಂದುವರೆಸುತ್ತೇನೆ. ನನ್ನ ಬಗ್ಗೆ ಯಾವುದೇ ಯೋಚನೆ ಮಾಡಬೇಡಿ ಎಂದು ತಮ್ಮ ಪೋಷಕರಿಗೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ. 
ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿ ಗುಜರಾತ್ ನಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಯಲ್ಲಿ ಹಾರ್ದಿಕ್ ಪಟೇಲ್ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಹಾರ್ದಿಕ್ ಬಂಧನಕ್ಕೊಳಪಡಿಸುತ್ತಿದ್ದಂತೆ ರಾಜ್ಯದಲ್ಲಿ ಹಲವು ಹಿಂಸಾಚಾರಗಳು ನಡೆದಿದ್ದವು. ಅಲ್ಲದೆ, ಹಲವರ ಪ್ರಾಣ ತ್ಯಾಗವಾಗಿತ್ತು. ಹೀಗಾಗಿ ಹಾರ್ದಿಕ್ ವಿರುದ್ಧ ದೇಶ ದ್ರೋಹದ ಪ್ರಕರಣಗಳು ದಾಖಲಿಸಲಾಗಿತ್ತು. ಇದೀಗ ಹಾರ್ದಿಕ್ ಅವರನ್ನು ಸೂರತ್ ಜೈಲಿನಲ್ಲಿರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.