ಪ್ರಯಾಣಿಕರಿಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡುವ ಹೈ ಟೆಕ್ ಬಸ್ ಕಂಡೆಕ್ಟರ್
ನೆಯ್ಯಾಂಟಿಕ್ಕರದಿಂದ ಟೆಕ್ನೋ ಪಾರ್ಕ್‌ಗೆ ಹೋಗುವ ಕೆಎಸ್‌ಆರ್ ಟಿಸಿ ಎಸಿ ವೋಲ್ವೋ ಬಸ್ ಕಂಡೆಕ್ಟರ್ ಬಿಎಸ್ ಶಿಜು. ಈತ ತನ್ನ ಬಸ್ಸಿನ ಪ್ರಯಾಣಿಕರಿಗೆ...

Published On :
ತಿರುವನಂತಪುರಂ: ನೆಯ್ಯಾಂಟಿಕ್ಕರದಿಂದ ಟೆಕ್ನೋ ಪಾರ್ಕ್‌ಗೆ ಹೋಗುವ ಕೆಎಸ್‌ಆರ್ ಟಿಸಿ ಎಸಿ ವೋಲ್ವೋ ಬಸ್ ಕಂಡೆಕ್ಟರ್ ಬಿಎಸ್ ಶಿಜು. ಈತ ತನ್ನ ಬಸ್ಸಿನ ಪ್ರಯಾಣಿಕರಿಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡಿ ಸಹಾಯ ಮಾಡುತ್ತಾನೆ. ಅದು ಹೇಗೆ ಅಂತೀರಾ? ತನ್ನ ಬಸ್ಸಿನಲ್ಲಿ ಪ್ರತೀ ದಿನ ಪ್ರಯಾಣಿಸುವ ಪ್ರಯಾಣಿಕರ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಈತ ಮಾಹಿತಿ ನೀಡುತ್ತಾನೆ. Volvo techies ಎಂದು ಹೆಸರಿರುವ ಈ ವಾಟ್ಸಾಪ್ ಗ್ರೂಪ್‌ನ್ನು ಶಿಜು 6 ತಿಂಗಳ ಹಿಂದೆ ಕ್ರಿಯೇಟ್ ಮಾಡಿದ್ದನು.
ಈ ಗ್ರೂಪ್‌ನಲ್ಲಿ ಬಸ್ ಎಲ್ಲಿಗೆ ತಲುಪಿತು? ಯಾವ ನಿಲ್ದಾಣದಲ್ಲಿದೆ? ಟ್ರಾಫಿಕ್ ಜಾಮ್ ಎಲ್ಲಿದೆ? ಎಲ್ಲ ಮಾಹಿತಿಗಳನ್ನು ಶೇರ್ ಮಾಡಲಾಗುತ್ತದೆ. ಬಸ್‌ನಲ್ಲಿರುವ ಪ್ರಯಾಣಿಕರು ಕೂಡಾ ಆಗಾಗ ಅಪ್‌ಡೇಟ್ ನೀಡುತ್ತಿರುವುದರಿಂದ ಮುಂದಿನ ಸ್ಟಾಪ್ ನಲ್ಲಿ ಹತ್ತಲಿರುವ ಪ್ರಯಾಣಿಕರಿಗೆ ಇದು ಸಹಾಯವಾಗುತ್ತದೆ.
ಬೆಳಗ್ಗಿನ ವೇಳೆ ಪ್ರಯಾಣಿಕರಿಗೆ ಬಸ್ ತಪ್ಪಿ ಹೋಗುತ್ತದೆ. ಆಗ ಅವರು ಬೈಕ್‌ನಲ್ಲಿಯೋ, ಕಾರ್‌ನಲ್ಲಿಯೋ ಬಂದು ಮುಂದೊಂದು ಸ್ಟಾಪ್‌ನಲ್ಲಿ ಬಸ್ ಹತ್ತುತ್ತಾರೆ. ಹಾಗೆ ಯಾರಿಗೂ ಬಸ್ ಮಿಸ್ ಆಗದಂತೆ ಆಗಲು ಈ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು ಅಂತಾರೆ 39 ಹರೆಯದ ಶಿಜು. ಈ ಬಸ್‌ನಲ್ಲಿ 70 ಮಂದಿ ನಿತ್ಯ ಪ್ರಯಾಣಿಕರಾಗಿದ್ದು, ಬೆಳಗ್ಗೆ 9 ಗಂಟೆಗೆ ಬಸ್ ಟೆಕ್ನೋಪಾರ್ಕ್‌ಗೆ ತಲುಪುತ್ತದೆ.
ಇಷ್ಟೇ ಅಲ್ಲ, ಈ ಬಸ್ಸಿನ ಪ್ರಯಾಣಿಕರನ್ನು ಶಿಜು ತಮ್ಮ ಕುಟುಂಬದಂತೆ ಪ್ರೀತಿಸುತ್ತಾನೆ. ಹುಟ್ಟುಹಬ್ಬ ಬಂದರೆ ಬಸ್ಸಿನಲ್ಲೇ ಸೆಲ್ಫಿ ಕ್ಲಿಕ್ಕಿಸಿ, ಅವರಿಷ್ಟದ ಹಾಡುಗಳನ್ನು ಹಾಕಿ ಸಂಭ್ರಮಾಚರಣೆ ಮಾಡುತ್ತಾನೆ.
ಮಲಯಿಂಕೀಳ್ ಬಳಿಯ ತಚ್ಚೋಟುಕ್ಕಾವ್ ನಿವಾಸಿಯಾದ ಶಿಜುಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಎಂಎಸ್ ಶೀಜಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


