ದೇಶ

ರೈಲಿನಲ್ಲಿ ಮಹಿಳೆ ಜತೆ ಟಿಸಿ ಅಸಭ್ಯ ವರ್ತನೆ: ವೈರಲ್ ಆದ ವಿಡಿಯೋ

ಜನರಲ್ ಟಿಕೆಟ್ ತೆಗೆದುಕೊಂಡು ರಿಸರ್ವೇಶನ್ ಬೋಗಿಯೊಳಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಟಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿರುವ...

ರೈಲಿನಲ್ಲಿ ಮಹಿಳೆ ಜತೆ ಟಿಸಿ ಅಸಭ್ಯ ವರ್ತನೆ: ವೈರಲ್ ಆದ ವಿಡಿಯೋ
ಮಹಿಳೆಯೊಂದಿಗೆ ಟಿಸಿ ಅಸಭ್ಯ ವರ್ತನೆ(ಚಿತ್ರ)
Published On :

ಹರ್ದಾ: ಜನರಲ್ ಟಿಕೆಟ್ ತೆಗೆದುಕೊಂಡು ರಿಸರ್ವೇಶನ್ ಬೋಗಿಯೊಳಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಟಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿರುವ ಘಟನೆ ಮಧ್ಯಪ್ರದೇಶದ ಹರ್ದಾದಲ್ಲಿ ನಡೆದಿದೆ.

ಹೋಶಿಯಾರ್‌‌ಪುರ್‌ದಿಂದ ಬಹರನ್‌‌ಪುರ್‌ಗೆ ಹೊರಟಿದ್ದ ರೈಲಿನಲ್ಲಿ ಜನರಲ್ ಬೋಗಿಯೊಳಗೆ ಸ್ಥಳವಿಲ್ಲದ ಕಾರಣ ರಿಸರ್ವೇಶನ್ ಬೋಗಿಯೊಳಗೆ ಮಹಿಳೆ ತನ್ನ ಮಗ ಹಾಗೂ ಮಗಳ ಜತೆ ರೈಲು ಹತ್ತಿದ್ದರು. ಈ ವೇಳೆ ಟಿಕೆಟ್ ತಪಾಸಣೆ ನಡೆಸಲು ಬಂದ ಟಿಸಿ ಅಕ್ರಮವಾಗಿ ರಿಸರ್ವೇಶನ್ ಬೋಗಿಯೊಳಗೆ ಬಂದಿದ್ದ ಮಹಿಳೆಯನ್ನು ಅಶ್ಲೀಲವಾಗಿ ನಿಂದಿಸಿದ್ದಾನೆ. ಈ ವೇಳೆ ಮಹಿಳೆಯ ಮಗ ಮತ್ತು ಟಿಸಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಯುವಕನಿಗೆ ಥಳಿಸಲು ಟಿಸಿ ಕೈಎತ್ತಿರುವ ದೃಶ್ಯಗಳನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಕೊನೆಗೆ ಮಹಿಳೆ ದಂಡ ತೆರಲು ಸಿದ್ಧಳಾಗಿ ವಿನಂತಿ ಮಾಡಿಕೊಂಡರೂ ಕೇಳದ ಟಿಸಿ ಆಕೆ ಮೇಲೆ ಹಲ್ಲೆಗೆ ಮುಂದಾಗಿದ್ದ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.