ದೇಶ

ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಶಶಿ ತರೂರ್

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೆ ಕಡಿಕಾರಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮೇಕ್ ಇನ್ ಇಂಡಿಯಾ ಹಾಗೂ ಹೇಟ್ ಇನ್ ಇಂಡಿಯಾ ಎರಡೂ ಜೊತೆಯಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ...

ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಶಶಿ ತರೂರ್
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ (ಸಂಗ್ರಹ ಚಿತ್ರ)
Published On :

ಬೋಸ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೆ ಕಡಿಕಾರಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮೇಕ್ ಇನ್ ಇಂಡಿಯಾ ಹಾಗೂ ಹೇಟ್ ಇನ್ ಇಂಡಿಯಾ ಎರಡೂ ಜೊತೆಯಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ವಾರ್ಷಿಕ ಭಾರತೀಯ ಸಮಾವೇಶ 2016ದಲ್ಲಿ ಮಾತನಾಡಿರುವ ಅವರು, ಆಡಳಿತಾರೂಢ ಪಕ್ಷದ ನಾಯಕರು ದೇಶದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿ ದೇಶದಲ್ಲಿರುವ ಶಕ್ತಿಯನ್ನು ಕುಗ್ಗಿಸುತ್ತಿದ್ದಾರೆ. ಹೀಗಿರುವಾಗ 'ಮೇಕ್ ಇನ್ ಇಂಡಿಯಾ' ಹಾಗೂ 'ಹೇಟ್ ಇನ್ ಇಂಡಿಯಾ' ಎರಡೂ ಒಂದೆಡೆ ಸಾಗಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ.

ವಿಶ್ವದಲ್ಲಿ ತನ್ನನ್ನು ಗುರ್ತಿಸಿಕೊಳ್ಳಲು ಹಾಗೂ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಭಾರತವು ವಿದೇಶಿಗರನ್ನು ಸೆಳೆಯಲು ಮೊದಲು ಪ್ರಮುಖವಾಗಿ ದೇಶದ ಒಳೆಗೆ ಅಭಿವೃದ್ಧಿಯನ್ನು ನಿರ್ಮಾಣ ಮಾಡಬೇಕು. ದೇಶದ ಉತ್ಪಾದನೆ ಹಾಗೂ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸಬೇಕು. ನಮ್ಮ ಒಳಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ನಮ್ಮ ಜನತೆಯನ್ನು ಆರೋಗ್ಯವಂತರಾಗಿ, ಆಸ್ತಿವಂತರಾಗಿ ಮಾಡಬೇಕೇ ಹೊರತು ಜಿಹಾದಿ ಭಯೋತ್ಪದಕರಾಗಿ ಅಲ್ಲ. ದೇಶದಲ್ಲಿ ಪ್ರಗತಿ ಬಗ್ಗೆ ಸಾಕಷ್ಟು ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಅದು ಜನರನ್ನು ತಲುಪುತ್ತಿಲ್ಲ.

ಒಂದು ಕೈಯನ್ನು ಇಟ್ಟುಕೊಟ್ಟು, ಮೇಕ್ ಇನ್ ಇಂಡಿ, ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಎಂದು ವಿದೇಶಗಳಲ್ಲಿ ಹೇಳುತ್ತಿದ್ದರೆ. ಅದು ಹೇಗೆ ತಾನೆ ಸೆಳೆಯಲು ಸಾಧ್ಯ. ಹೇಟ್ ಇನ್ ಇಂಡಿಯಾ ಬಗ್ಗೆ ಅಭಿಪ್ರಾಯಿರುವವರನ್ನಿಟ್ಟುಕೊಂಡು ವಿದೇಶಿಗರನ್ನು ಸೆಳೆಯಲು ಸಾಧ್ಯವಿಲ್ಲ.

ದೇಶದಲ್ಲಿರುವ ಅಲ್ಪಸಂಖ್ಯಾತರ ಕುರಿತಂತೆ ಆಡಳಿತಾರೂಢ ಪಕ್ಷದ ನಾಯಕರೇ ವಿರುದ್ಧ ಮಾತನಾಡುತ್ತಿರುವುದು ನಿಜಕ್ಕೂ ಸರಿಯಾದ ಬೆಳವಣಿಕೆಯಲ್ಲ. ಇದು ದೇಶದಲ್ಲಿರುವ ಶಕ್ತಿಯನ್ನು ಕುಗ್ಗಿಸುತ್ತದೆ. ಭಾರತ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದ್ದರೆ. ಮೊದಲು ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಏನೇ ಹೇಳಿದರೂ, ಮಾಡಿದರೂ ಅದನ್ನು ಸಮರ್ಥಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿಯಲ್ಲಿ ನಡೆದ ವಿದೇಶಿ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮಾತನಾಡಿರುವ ಅವರು, ರಾಜಧಾನಿ ದೆಹಲಿಯ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಸರಿಯಲ್ಲ. ಮುಸ್ಲಿಂನಾಗುವುದಕ್ಕಿಂತ ಗೋವಾಗುವುದೇ ಎಷ್ಟೋ ಒಳ್ಳೆಯದು ಎಂಬ ಭಾವನೆ ಹುಟ್ಟುತ್ತಿದೆ. ಈ ರೀತಿಯ ಭಾವನೆಗಳು ಮೂಡುವುದಕ್ಕೆ ಬಿಡಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.