ದೇಶ

ಪ್ರಧಾನಿ ಭೇಟಿ ಮಾಡಿದ ಬುಖಾರಿ, ಐಸಿಸ್ ವಿರುದ್ಧ ಹೋರಾಟದ ಹೆಸರಿನಲ್ಲಿ ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡದಂತೆ ಆಗ್ರಹ

ಮುಸ್ಲಿಂ ಯುವಕರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾಮಾ ಮಸೀದಿಯ ಶಾಹಿ...

ಪ್ರಧಾನಿ ಭೇಟಿ ಮಾಡಿದ ಬುಖಾರಿ, ಐಸಿಸ್ ವಿರುದ್ಧ ಹೋರಾಟದ ಹೆಸರಿನಲ್ಲಿ ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡದಂತೆ ಆಗ್ರಹ
ಬುಖಾರಿ - ನರೇಂದ್ರ ಮೋದಿ
Published On :
ನವದೆಹಲಿ: ಮುಸ್ಲಿಂ ಯುವಕರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಐಸಿಸ್ ವಿರುದ್ಧದ ಹೋರಾಟದ ಹೆಸರಿನಲ್ಲಿ ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡದಂತೆ ಶಾಹಿ ಇಮಾಮ್ ಅಹ್ಮದ್ ಬುಖಾರಿ ಆಗ್ರಹಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಭಯೋತ್ಪಾದನೆ ಆರೋಪದ ಮೇಲೆ ಬಹಳಷ್ಟು ಮುಸ್ಲಿಂ ಯುವಕರ ಈಗ ಜೈಲಿನಲ್ಲಿದ್ದಾರೆ ಎಂದು ಬುಖಾರಿ ಹೇಳಿದ್ದಾರೆ.
ಶಾಹಿ ಇಮಾಮ್ ಕಚೇರಿಯ ಪ್ರಕಾರ, ಬುಖಾರಿ ಅವರು ಮುಸ್ಲಿಂ ಯುಕರ ಬಂಧನದ ಕುರಿತು ಪಾರದರ್ಶಕತೆ ಇರಲಿ ಎಂದು ಪ್ರಧಾನಿಗೆ ಒತ್ತಾಯಿಸಿದ್ದಾರೆ.
'ಪ್ರಧಾನಿಯವರು ತಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಕೋಮು ಸಾಮರಸ್ಯ ಹಾಳುಮಾಡುವಂತ ಯಾವುದೇ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ' ಎಂದು ಬುಖಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.