ದೇಶ

10 ನಿಮಿಷದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಎರಡು ಮಗುವಿಗೆ ಜನ್ಮ ನೀಡುವುದನ್ನು ಕೇಳಿರಬಹುದು. ಇಲ್ಲೊಬ್ಬ ಮಹಿಳೆ ಕೇವಲ 10 ನಿಮಿಷದಲ್ಲಿ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದ್ದಾಳೆ...

10 ನಿಮಿಷದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
10 ನಿಮಿಷದಲ್ಲಿ 4 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ ಮಹಾತಾಯಿ! (ಸಾಂದರ್ಭಿಕ ಚಿತ್ರ)
Published On :

ಧನ್ಬಾದ್: ಎರಡು ಮಗುವಿಗೆ ಜನ್ಮ ನೀಡುವುದನ್ನು ಕೇಳಿರಬಹುದು. ಇಲ್ಲೊಬ್ಬ ಮಹಿಳೆ ಕೇವಲ 10 ನಿಮಿಷದಲ್ಲಿ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದ್ದಾಳೆ.

ಬಿಹಾರದ ಧನ್ಬಾದ್ ನ ಕತರಾಸ್ ಗ್ರಾಮದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಕೇವಲ 10 ನಿಮಿಷದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಜನ್ಮ ನೀಡಿರುವ ನಾಲ್ಕು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವೈದ್ಯ ವಿಕಾಶ್ ಹಜಾರಾ ಅವರು, ಸಿಸೇರಿಯನ್ ಮಕ್ಕಳನ್ನು ಹೊರತೆಗೆಯಲಾಗಿದ್ದು, ನಾಲ್ಕು ಮಕ್ಕಳ ತೂಕ 1.1 ಕೆ.ಜಿ, 950 ಗ್ರಾಂ, 925 ಗ್ರಾಂ ಹಾಗೂ 900 ಗ್ರಾಂ ನಷ್ಟಿದೆ, ಜನನ 7.5 ತಿಂಗಳಲ್ಲಿ ಆಗಿರುವುದರಿಂದ ಮಕ್ಕಳಿಗೆ ಉಸಿರಾಟ ಹಾಗೂ ಇನ್ನಿತರೆ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ತಾಯಿ ಎತ್ತರ ಕಡಿಮೆ ಇದ್ದುದರಿಂದ ಗರ್ಭಾವಸ್ಥೆಯ ಅವಧಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ರಕ್ತಹೀನತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ.

ಮಕ್ಕಳಿಗೆ ಜನ್ಮ ನೀಡಿರುವ ಮಹಿಳೆ ಆಶಿಶ್ ಭಾಜನಿಯಾ ಎಂಬುವವರ ಪತ್ನಿ ಫೋರಾಮ್ ಭಾಜನಿಯಾ ಎಂದು ಹೇಳಲಾಗುತ್ತಿದ್ದು, ಈಕೆ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.