ನಾಲ್ಕು ರಾಜ್ಯಗಳಲ್ಲಿ ನರೇಂದ್ರ ಮೋದಿ ರೈತಪರ ರ್ಯಾಲಿ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾರ್ಪೊರೇಟ್ ಕಂಪೆನಿಗಳು ಮತ್ತು ಉದ್ಯಮಿಗಳ ಪರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಾ ಬಂದಿವೆ...

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾರ್ಪೊರೇಟ್ ಕಂಪೆನಿಗಳು ಮತ್ತು ಉದ್ಯಮಿಗಳ ಪರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಾ ಬಂದಿವೆ. ಆಪಾದನೆಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿಯವರು ಇದೀಗ ರೈತರತ್ತ ಮುಖ ಮಾಡಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ರೈತರ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೊದಲನೇ ಹಂತದ ರೈತಪರ ರ್ಯಾಲಿಗಳನ್ನು ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಗಳಲ್ಲಿ ಮೋದಿಯವರು ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಳೆ ವಿಮಾ ಯೋಜನೆ, ನೀರಾವರಿ ಯೋಜನೆ, ಯೂರಿಯಾ ಮತ್ತು ಮಣ್ಣು ಆರೋಗ್ಯ ಕಾರ್ಡ್ ಗಳ ಬಗ್ಗೆ ಮಾತನಾಡಲಿದ್ದಾರೆ.
ಬಿಜೆಪಿಯ ಕಿಸಾನ್ ಮೋರ್ಚ ಸಂಘಟನೆ ಬೆಳೆ ವಿಮಾ ಯೋಜನೆಗೆ ರೈತರಿಗೆ ತಿಳುವಳಿಕೆ ನೀಡಲು ಪ್ರತ್ಯೇಕ ಸಭೆ, ರ್ಯಾಲಿಗಳನ್ನು ನಡೆಸಲಿದೆ. ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಕೃಷಿ ಇಲಾಖೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು, ಅವರಿಗೆ ಪ್ರತ್ಯೇಕವಾದ ಕಿಸಾನ್ ಚಾನಲ್ ಮತ್ತು ಮೊಬೈಲ್ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದೆ.
ಬಿಜೆಪಿಯ ರೈತಪರ ರ್ಯಾಲಿ ಮಧ್ಯಪ್ರದೇಶದಲ್ಲಿ ಈ ತಿಂಗಳ 18ರಂದು, ಒಡಿಶಾದಲ್ಲಿ 21ರಂದು, ಕರ್ನಾಟಕದಲ್ಲಿ ಫೆಬ್ರವರಿ 27 ಮತ್ತು ಉತ್ತರ ಪ್ರದೇಶದಲ್ಲಿ ಫೆಬ್ರವರಿ 28ರಂದು ನಡೆಯಲಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಒಡಿಶಾದ ಬಾರ್ಗಾದಲ್ಲಿ ನಡೆಸಿದ್ದ ರ್ಯಾಲಿಯ ಸ್ಥಳದಲ್ಲೇ ಮೋದಿಯವರು ಕೂಡ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳು ಇದೇ 7ರಂದು ಪಾರಾದೀಪ್ ನಲ್ಲಿ ತೈಲ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿ ನಂತರ ಪುರಿಗೆ ಭೇಟಿ ನೀಡಲಿದ್ದಾರೆ. ಈ ರ್ಯಾಲಿಗಳು ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನಕ್ಕೆ ಮುನ್ನ ಅಥವಾ ಬಜೆಟ್ ಮಂಡನೆಯ ಸ್ವಲ್ಪ ದಿನಗಳ ನಂತರ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


