ವ್ಯಕ್ತಿಯ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಹೆಸರು, ಫೋಟೋ!
ಚುನಾವಣೆ ಆಯೋಗಗಳು ಮಾಡುವ ಯಡವಟ್ಟುಗಳಿಗೆ ಹೈದರಾಬಾದ್ ನಲ್ಲಿ ನಡೆದಿರುವ ಈ ಘಟನೆಯೊಂದು ಪ್ರಮುಖ ಉದಾಹರಣೆ ಎನ್ನಬಹುದು. ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಭಾವಚಿತ್ರವನ್ನು...

ಹೈದರಾಬಾದ್: ಚುನಾವಣೆ ಆಯೋಗಗಳು ಮಾಡುವ ಯಡವಟ್ಟುಗಳಿಗೆ ಹೈದರಾಬಾದ್ ನಲ್ಲಿ ನಡೆದಿರುವ ಈ ಘಟನೆಯೊಂದು ಪ್ರಮುಖ ಉದಾಹರಣೆ ಎನ್ನಬಹುದು. ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಭಾವಚಿತ್ರವನ್ನು ಒಳಗೊಂಡಿರುವ ಅಧಿಕೃತ ವೋಟರ್ ಐಡಿ (ಗುರುತಿನ ಚೀಟಿ)ಯನ್ನು ವ್ಯಕ್ತಿಯೋರ್ವ ಹೊಂದಿರುವ ವಿಷಯವೊಂದು ಬುಧವಾರ ನಾಗರೀಕ ಚುನಾವಣೆ ವೇಳೆ ತಿಳಿದುಬಂದಿದೆ.
ಹೈದರಾಬಾದ್ ಚಾರ್ಮಿನಾರ್ ನಲ್ಲಿರುವ ಗೌಲಿಪುರದಲ್ಲಿ ನಾಗರೀಕ ಚುನಾವಣೆಯೊಂದು ನಡೆಯುತ್ತಿತ್ತು. ವ್ಯಕ್ತಿಯೋರ್ವ ಮತ ಕ್ಷೇತ್ರಕ್ಕೆ ಬಂದು ಮತದಾನ ಮಾಡಲು ಸಿಬ್ಬಂದಿಗಳಿಗೆ ಐಡಿಯನ್ನು ನೀಡಿದ್ದಾನೆ. ಈ ವೇಳೆ ಐಡಿಯಲ್ಲಿ ಸಲ್ಮಾನ್ ಖಾನ್ ಹೆಸರು ಹಾಗೂ ಅವರ ಭಾವಚಿತ್ರವಿರುವುದು ಕಂಡುಬಂದಿದೆ. ಇದನ್ನು ಕಂಡ ಅಧಿಕಾರಿಗಳು ಕೂಡಲೇ ಐಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ವ್ಯಕ್ತಿಗೆ ಮತದಾನ ಮಾಡಲು ಅವಕಾಶವನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.
ವ್ಯಕ್ತಿಗೆ ನೀಡಲಾಗಿರುವ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಅವರ ಹೆಸರಲ್ಲದೆ, ಅವರ ತಂದೆಯ ಹೆಸರು ಸಲೀಂ ಖಾನ್ ಎಂದು ನೀಡಲಾಗಿದೆ. ಆದರೆ, ವಯಸ್ಸು ಮಾತ್ರ 64 ಎಂದು ನಮೂದಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


