ಐಎಸ್ಐ ಏಜೆಂಟ್, ಉಗ್ರನನ್ನು ಬಂಧಿಸಿದ ಗುಪ್ತಚರ ದಳ
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಏಜೆಂಟ್ ಓರ್ವನನ್ನು ಪಂಜಾಬ್ ನಲ್ಲಿ ಗುಪ್ತಚರ ದಳ ಬಂಧಿಸಿದೆ...

ಪಠಾಣ್ ಕೋಟ್(ಪಂಜಾಬ್): ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಏಜೆಂಟ್ ಓರ್ವನನ್ನು ಪಂಜಾಬ್ ನಲ್ಲಿ ಗುಪ್ತಚರ ದಳ ಬಂಧಿಸಿದೆ.
ಪಂಜಾಬ್ ನ ಪಠಾಣ್ ಕೋಟ್ ಉಗ್ರ ದಾಳಿ ಬಳಿಕ ಹಲವರು ಐಎಸ್ಐ ಏಜೆಂಟ್ ರನ್ನು ಎನ್ಐಎ ಬಂಧಿಸಿತ್ತು. ಇದೀಗ ಪಠಾಣ್ ಕೋಟ್ ನ ಆರ್ಮಿ ಕಂಟೋನ್ಮೆಂಟ್ ನ ಮಮೂನ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಾ ಐಎಸ್ಐ ಪರ ಕೆಲಸ ಮಾಡುತ್ತಿದ್ದ ಇರ್ಶಾದ್ ನನ್ನು ಗುಪ್ತಚರ ದಳ ಬಂಧಿಸಿದೆ.
ಗುಪ್ತಚರ ಬಂಧನಕ್ಕೊಳಗಾದ ಇರ್ಶಾದ್ ನ ಮೊಬೈಲ್ ನಲ್ಲಿ ಪಠಾಣ್ ಕೋಟ್ ದಾಳಿ ಸಂಬಂಧ ಹಲವು ಫೋಟೋಗಳು ಪತ್ತೆಯಾಗಿದ್ದು, ಇರ್ಶಾದ್ ಉಗ್ರ ಸಜ್ಜದ್ ಜತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದ. ಇದೀಗ ಇರ್ಶಾದ್ ನನ್ನು ನಿಯಂತ್ರಿಸುತ್ತಿದ್ದ ಉಗ್ರ ಐಎಸ್ಐ ಜತೆ ನೇರ ಸಂಪರ್ಕ ಹೊಂದಿದ್ದ ಸಜ್ಜದ್ ನನ್ನು ಜಮ್ಮುವಿನಲ್ಲಿ ಗುಪ್ತಚರ ದಳ ಬಂಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


