ಕೃಷಿ ಉತ್ಪಾದನೆ ಕುಂಟಿತ, ಆಹಾರ ಉತ್ಪನ್ನಗಳ ಆಮದು ಏರಿಕೆ
ಕೃಷಿ ಉತ್ಪಾದನೆ ಕುಂಟಿತವಾಗಿದ್ದು ಭಾರತ ಶೀಘ್ರವೆ ಹಲವು ಆಹಾರ ಉತ್ಪನ್ನಗಳ ಅಮದುದಾರನಾಗುವ ಸಾಧ್ಯತೆ ಇದೆ.

ನವದೆಹಲಿ: ಕೃಷಿ ಉತ್ಪಾದನೆ ಕುಂಟಿತವಾಗಿದ್ದು ಭಾರತ ಶೀಘ್ರವೆ ಹಲವು ಆಹಾರ ಉತ್ಪನ್ನಗಳ ಅಮದುದಾರನಾಗುವ ಸಾಧ್ಯತೆ ಇದೆ. ಕುಸಿತ ಕಂಡಿರುವ ಕೃಷಿ ಉತ್ಪಾನೆಯನ್ನು ಸುಧಾರಿಸಿ ಬೆಲೆ ಏರಿಕೆಯನ್ನು ತಡೆಗಟ್ಟುವುದಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಹಾರ ಮತ್ತು ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ವರ್ಷದಿಂದ ಭಾರತ ಪ್ರಮುಖ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ ಎಂದು ವರ್ತಕರು ಎಚ್ಚರಿಕೆ ನೀಡಿದ್ದಾರೆ. ನಿರಂತರವಾಗಿ ಎದುರಾದ ಬಲಗಾಲ, ಕೃಷಿ ಕ್ಷೇತ್ರದ ಮೇಲೆ ದೀರ್ಘಾವಧಿಯ ಬಂಡವಾಳ ಹೂಡಿಕೆಯ ಕೊರತೆ ಹಾಗೂ ಬೆಳವಣಿಗೆಯಾಗುತ್ತಿರುವ ಜನಸಂಖ್ಯೆಯ ಬೆಡಿಕೆ ಭಾರತ ದೇಶ ಆಹಾರ ಪದಾರ್ಥಗಳ ವಿಷಯದಲ್ಲಿ ಸ್ವಾವಲಂಬಿಯಾಗುವುದಕ್ಕೆ ಸವಾಲಾಗಿದೆ.
ಕೃಷಿ ಉತ್ಪಾದನೆ ಕುಟುಂಟಿತವಾಗಿರುವುದು ದೇಶದ ಆರ್ಥಿಕ ಬೆಳವಣಿಗೆಗೂ ಪ್ರತಿಕೂಲ ಪರಿಣಾಮ ಬೀರಲಿದ್ದು, ಕೃಷಿ ಉತ್ಪಾದನೆ ಏರಿಕೆ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೆಲವೊಂದು ಗಂಭೀರವಾದ ಸಲಹೆ ನೀಡಿದ್ದು ಆಹಾರ ಉತ್ಪನ್ನಗಳ ಸರಬರಾಜು ಹಾಗೂ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಕೃಷಿ ವಲಯಕ್ಕೆ ಸಂಬಂಧಿಸಿದ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ 16 ವರ್ಷಗಳಲ್ಲೇ ಮೊದಲ ಬಾರಿಗೆ ಹೊರಗಿನಿಂದ ಜೋಳ ಖರೀದಿಸಿದೆ, ಇನ್ನು ಉಳಿದ ಪ್ರಮುಖ ಆಹಾರ ಉತ್ಪನ್ನಗಳನ್ನೂ ಶೀಘ್ರವೇ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


