ದೇಶ

ಅರುಣಾಚಲ ಪ್ರದೇಶದಲ್ಲಿ ಈಗ ಬಿಜೆಪಿ ಸರ್ಕಾರ ರಚನೆ

ಅರುಣಾಚಲ ಪ್ರದೇಶದ ಆಡಳಿತರೂಢ ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿ(ಪಿಪಿಎ)ಯ 43 ಶಾಸಕರ ಪೈಕಿ 33 ಶಾಸಕರು ಶನಿವಾರ...

ಅರುಣಾಚಲ ಪ್ರದೇಶದಲ್ಲಿ ಈಗ ಬಿಜೆಪಿ ಸರ್ಕಾರ ರಚನೆ
ಪೆಮಾ ಖಂಡು
Published On :
ಇಟಾನಗರ: ಅರುಣಾಚಲ ಪ್ರದೇಶದ ಆಡಳಿತರೂಢ ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿ(ಪಿಪಿಎ)ಯ 43 ಶಾಸಕರ ಪೈಕಿ 33 ಶಾಸಕರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದು, ಇದರೊಂದಿಗೆ ಅಸ್ಸಾಂ ನಂತರ ಈಶಾನ್ಯದ ಮತ್ತೊಂದು ರಾಜ್ಯ ಬಿಜೆಪಿ ಪಾಲಾಗಿದೆ. 
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿಯ(ಪಿಪಿಎ) ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಒಟ್ಟು 11 ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಮಾನತುಗೊಂಡ ಶಾಸಕರು ಸೇರಿದಂತೆ ಒಟ್ಟು 33 ಶಾಸಕರು ಬಿಜೆಪಿ ಸೇರುವ ಮೂಲಕ ಪಿಪಿಎಗೆ ತಿರುಗೇಟು ನೀಡಿದ್ದಾರೆ.
60 ಸದಸ್ಯರನ್ನು ಹೊಂದಿರುವ ಅರುಣಾಚಲ ಪ್ರದೇಶದ ವಿಧಾನ ಸಭೆಯಲ್ಲಿ ಪಿಪಿಎ ಈಗ ಕೇವಲ 10 ಶಾಸಕರನ್ನು ಮಾತ್ರ ಉಳಿಸಿಕೊಂಡಂತಾಗಿದೆ.
ಪಿಪಿಎ ಪಕ್ಷದವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವಂತೆ ನಾನು ಸೇರಿದಂತೆ 33 ಶಾಸಕರ ಪಟ್ಟಿಯನ್ನು ನಾನು ಸ್ಪೀಕರ್ ಗೆ ನೀಡಿದ್ದೇನೆ ಮತ್ತು ಸ್ಪೀಕರ್ ಅದನ್ನು ಅಂಗೀಕರಿಸಿದ್ದಾರೆ ಎಂದು ಪೆಮಾ ಖಂಡು ಅವರು ವರದಿಗಾರರಿಗೆ ತಿಳಿಸಿದ್ದಾರೆ. ಇದರೊಂದಿಗೆ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಅವರು, ಅರುಣಾಚಲ ಪ್ರದೇಶ ಬಿಜೆಪಿ ಆಡಳಿತವಿರುವ 10 ರಾಜ್ಯ ಮತ್ತು ಬಿಜೆಪಿ ಮೈತ್ರಿಕೂಟದ 14 ರಾಜ್ಯವಾಗಿದೆ ಎಂದಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಪೆಮಾ ಖಂಡುಗೆ ಅಭಿನಂದನೆ ಹಾಗೂ ಬಿಜೆಪಿ ಪರಿವಾರಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಪೆಮಾ ಖಂಡು ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ಪಕ್ಷಾಂತರಗೊಂಡು ಪಿಪಿಎ ಸೇರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.