ದೇಶ

ತುಮಕೂರು-ಬಳ್ಳಾರಿ ಹೊಸ ರೈಲು ಮಾರ್ಗ ಉದ್ಘಾಟನೆ

ರಾಯದುರ್ಗ ತುಮಕೂರು ರೈಲ್ವೆ ಯೋಜನೆಯ ಮೊದಲ ಹಂತದ (ತುಮಕೂರು-ಬಳ್ಳಾರಿವರೆಗಿನ) ಹೊಸ ರೈಲು ಮಾರ್ಗ ಡಿ.30 ರಂದು ಉದ್ಘಾಟನೆಯಾಗಿದೆ.

ತುಮಕೂರು-ಬಳ್ಳಾರಿ ಹೊಸ ರೈಲು ಮಾರ್ಗ ಉದ್ಘಾಟನೆ
ಸುರೇಶ್ ಪ್ರಭು
Published On :
ವಿಜಯವಾಡ: ಭೂಸ್ವಾಧೀನ ಪ್ರಕ್ರಿಯೆ, ಅನುದಾನದ ಮುಗ್ಗಟ್ಟು ಸೇರಿದಂತೆ ಹಲವು ಕಾರಣಗಳಿಂದಾಗಿ ವಿಳಂಬವಾಗಿದ್ದ ರಾಯದುರ್ಗ ತುಮಕೂರು ರೈಲ್ವೆ ಯೋಜನೆಯ ಮೊದಲ ಹಂತದ (ತುಮಕೂರು-ಬಳ್ಳಾರಿವರೆಗಿನ) ಹೊಸ ರೈಲು ಮಾರ್ಗ ಡಿ.30 ರಂದು ಉದ್ಘಾಟನೆಯಾಗಿದೆ. 
ವಿಜಯವಾಡದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲನ್ನು ಉದ್ಘಾಟನೆ ಮಾಡಿದ್ದಾರೆ. ರಾಯದುರ್ಗ-ತುಮಕೂರು 40 ಕಿಮಿ ದೂರದ ರೈಲು ಮಾರ್ಗ ಉದ್ಘಾಟನೆಯಾಗಿರುವುದು ತುಮಕೂರು ಹಾಗೂ ಬಳ್ಳಾರಿಯ ಕೈಗಾರಿಕ ವಲಯದಲ್ಲಿ ಹೆಚ್ಚಿನ ಪ್ರಗತಿ, ವಹಿವಾಟಿಗೆ ನೆರವಾಗಲಿದೆ. 
Story image
ದಕ್ಷಿಣ ರೈಲ್ವೆ ವಲಯ ವಿಭಾಗದಿಂದ ಸುಮಾರು 330 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ರೈಲು ಮಾರ್ಗವನ್ನು ನಿರ್ಮಿಸಲಾಗಿದ್ದು, ರಾಯದುರ್ಗ, ಕಲ್ಯಾಣದುರ್ಗ ಮಾರ್ಗವಾಗಿ ಸಂಚರಿಸಲಿದ್ದು, ರಸ್ತೆ ಮೇಲ್ಭಾಗದಲ್ಲಿರುವ 6 ಸೇತುವೆ ಹಾಗೂ 16 ಅಂಡರ್ ಬ್ರಿಡ್ಜ್ ಗಳ ಮೂಲಕ ಕ್ರಮಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 
ಡಿ.30 ರಂದು ಉದ್ಘಾಟನೆಯಾಗಿರುವ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದ ಯೋಜನೆ 2007-08 ರಲ್ಲಿ ಮಂಜೂರಾತಿ ಪಡೆದು, 2010-11ರಲ್ಲಿ ಅನುಮೋದನೆಗೊಂಡಿತ್ತು. ಈ ಯೋಜನೆಗೆ ಆಂಧ್ರ, ಕರ್ನಾಟಕ ಹಾಗೂ ರೈಲ್ವೆ ಇಲಾಖೆ ಶೇ 50:50 ಅನುಪಾತದಲ್ಲಿ ಯೋಜನೆಗೆ ಹಣ ಹೂಡಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.