ಮಣಿಪುರ ಹಿಂಸಾಚಾರ: ರಾಷ್ಟ್ರೀಯ ಹೆದ್ದಾರಿ ತೆರವಿಗೆ 4 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿ ರವಾನೆ
ಮಣಿಪುರ ವಿಧಾನಸಭೆಯಲ್ಲಿ ಕೆಲವು ಮಸೂದೆಗಳಿಗೆ ಅಂಗೀಕಾರ ನೀಡಿದ್ದನ್ನು ಖಂಡಿಸಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು...

Published On :
ಇಂಪಾಲ್: ಮಣಿಪುರ ವಿಧಾನಸಭೆಯಲ್ಲಿ ಕೆಲವು ಮಸೂದೆಗಳಿಗೆ ಅಂಗೀಕಾರ ನೀಡಿದ್ದನ್ನು ಖಂಡಿಸಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ 4 ಸಾವಿರ ಪ್ಯಾರಮಿಲಿಟರಿ ಸಿಬ್ಬಂದಿಯನ್ನು ಕಳುಹಿಸಲು ತೀರ್ಮಾನಿಸಿದೆ.
ಭೂ ಕಂದಾಯ ಮತ್ತು ಭೂ ಸುಧಾರಣೆ ಮಸೂದೆ, ಮಣಿಪುರ ಅಂಗಡಿಗಳು ಮತ್ತು ಸಂಸ್ಥೆ ಮಸೂದೆ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದಾದ ಬಳಿಕ ನಾಗಾ ಸಮೂದಾಯದವರು ಕಳೆದೆರೆಡು ತಿಂಗಳಿನಿಂದ ಹಿಂಸಾಚಾರ ನಡೆಸುತ್ತಿದ್ದು ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸುವ ಸಲುವಾಗಿ ಪ್ಯಾರಮಿಲಿಟರಿ ಪಡೆಯನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ಮುಂದಾಗಿದೆ.
ಸದ್ಯ ಮಣಿಪುರದಿಂದ ನಾಗಲ್ಯಾಂಡ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಾ ಸಮೂದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಳೆದೆರಡು ತಿಂಗಳಿನಿಂದ ಹೆದ್ದಾರಿ ಬಂದ್ ಆಗಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗಿದೆ. ಇದನ್ನು ತೆರವುಗೊಳಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನವೆಂಬರ್ 1 ರಿಂದ ಯುನೈಟೆಡ್ ನಾಗ ಕೌನ್ಸಿಲ್(ಯುಎನ್ಸಿ) ಮಣಿಪುರದಲ್ಲಿ ಆರ್ಥಿಕ ದಿಗ್ಬಂದನ ಹೇರಿದೆ. ಇನ್ನು ಯುಎನ್ಸಿ ಇಂಪಾಲ್-ಧಿಮಾಪುರ್ ರಾಷ್ಟ್ರೀಯ ಹೆದ್ದಾರಿ-2, ಇಂಪಾಲ್-ಜಿರಿಬಾಮ್ ರಾಷ್ಟ್ರೀಯ ಹೆದ್ದಾರಿ-37ಅನ್ನು ಕಳೆದ 55 ದಿನಗಳಿಂದ ಬಂದ್ ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಣಿಪುರManipurಹೆದ್ದಾರಿ ಬಂದ್Paramilitary personnelHighway BlockadeNaga Groupಪ್ಯಾರಮಿಲಿಟರ್ ಸಿಬ್ಬಂದಿನಾಗಾ ಸಮೂದಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


