ದೇಶ

ಗುಜರಾತ್‌ನಲ್ಲಿ 26 ಲಕ್ಷ ಮೌಲ್ಯದ ನಕಲಿ ಹೊಸ ನೋಟು ವಶ: ಇಬ್ಬರ ಬಂಧನ

ಗುಜರಾತ್ ನ ರಾಜ್ಕೋಟ್ ನಲ್ಲಿ 26 ಲಕ್ಷ ಮೌಲ್ಯದ 500 ಮತ್ತು 2000 ರುಪಾಯಿಯ ಹೊಸ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು...

ಗುಜರಾತ್‌ನಲ್ಲಿ 26 ಲಕ್ಷ ಮೌಲ್ಯದ ನಕಲಿ ಹೊಸ ನೋಟು ವಶ: ಇಬ್ಬರ ಬಂಧನ
ನಕಲಿ ಹೊಸ ನೋಟು
Published On :
ರಾಜ್ಕೋಟ್: ಗುಜರಾತ್ ನ ರಾಜ್ಕೋಟ್ ನಲ್ಲಿ 26 ಲಕ್ಷ ಮೌಲ್ಯದ 500 ಮತ್ತು 2000 ರುಪಾಯಿಯ ಹೊಸ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 
ನಗರದ ಕ್ರೈಂ ಬ್ರಾಂಚ್ ಪೊಲೀಸರು ಹನುಮಾನ್ ಮೇದಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಇಬ್ಬರು ಖತರ್ನಾಖ್ ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 26 ಲಕ್ಷ ರುಪಾಯಿ ಮೌಲ್ಯದ 2000 ನಕಲಿ ನೋಟು ಮತ್ತು 10 ಸಾವಿರ ರುಪಾಯಿ ಮೌಲ್ಯದ 500 ಮುಖಬೆಲೆಯ ನಕಲಿ ನೋಟುಗಳನ್ನು ಇಟ್ಟುಕೊಂಡಿದ್ದರು. 
ಬಂಧಿತ ಆರೋಪಿಗಳನ್ನು ಅಹಮದಾಬಾದ್ ನ ಹೃದಯ್ ಜಗಣಿ ಮತ್ತು ಲಕ್ಷ್ಮಣ್ ಚೌಹಾಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ನೋಟುಗಳನ್ನು ತಮ್ಮ ಕಾರಿನ ಸ್ಪೀಕರ್ ಒಳಗೆ ಅಡಗಿಸಿಟ್ಟಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.