ದೇಶ

ಜನವರಿ 1ರಿಂದ ದೆಹಲಿಯ 10 ಮೆಟ್ರೊ ನಿಲ್ದಾಣಗಳಲ್ಲಿ ನಗದುರಹಿತ ವಹಿವಾಟು

ದೆಹಲಿಯ 10 ಮೆಟ್ರೊ ರೈಲು ನಿಲ್ದಾಣಗಳು ಮುಂದಿನ ವರ್ಷ ಜನವರಿ ಒಂದರಿಂದ ಸಂಪೂರ್ಣ ನಗದು...

ಜನವರಿ 1ರಿಂದ ದೆಹಲಿಯ 10 ಮೆಟ್ರೊ ನಿಲ್ದಾಣಗಳಲ್ಲಿ ನಗದುರಹಿತ ವಹಿವಾಟು
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ದೆಹಲಿಯ 10 ಮೆಟ್ರೊ ರೈಲು ನಿಲ್ದಾಣಗಳು ಮುಂದಿನ ವರ್ಷ ಜನವರಿ ಒಂದರಿಂದ ಸಂಪೂರ್ಣ ನಗದು ರಹಿತ ವಹಿವಾಟುಗಳಿಗೆ ಒಳಪಡಲಿದೆ. ದೆಹಲಿಯ ರೊಶಿನಿ ಪೂರ್ವ, ರೊಹಿಣಿ ಪಶ್ಚಿಮ, ಮಯೂರ್ ವಿಹಾರ್ ಮೊದಲ ಹಂತ, ತಿಲಕ್ ನಗರ್, ನೊಯ್ಡಾ 15ನೇ ವಲಯ ಮತ್ತು ನೆಹರೂ ಪ್ಯಾಲೆಸ್ ಸ್ಟೇಷನ್ ಗಳಲ್ಲಿ ಡಿಜಿಟಲೀಕರಣ ವ್ಯವಸ್ಥೆ ಬರಲಿದೆ.
ಟೊಕನ್, ಸ್ಮಾರ್ಟ್ ಕಾರ್ಡು ಖರೀದಿ, ಟಾಪ್ ಅಪ್ ಗಳು ಮೊಬೈಲ್ ವಾಲೆಟ್, ಡೆಬಿಟ್ ಕಾರ್ಡು ಮತ್ತು ಕ್ರೆಡಿಟ್ ಕಾರ್ಡುಗಳ ಮೂಲಕ ನಗದುರಹಿತ ವಹಿವಾಟು ನಡೆಯಲಿದೆ.
ಈ ನಿಲ್ದಾಣಗಳಲ್ಲಿ ಈಗಾಗಲೇ ಶೇಕಡಾ 70ರಷ್ಟು ಮಂದಿ ಸ್ಮಾರ್ಟ್ ಕಾರ್ಡುಗಳನ್ನು ಬಳಸುತ್ತಿದ್ದಾರೆ. ಇತರ ಮೆಟ್ರೊ ರೈಲು ನಿಲ್ದಾಣಗಳಿಗೆ ಹೋಲಿಸಿದರೆ ಇಲ್ಲಿ ನಗದು ವಹಿವಾಟು ಕಡಿಮೆಯಿದೆ. ಭಾರತದಲ್ಲಿ ನಗದುರಹಿತ ವಹಿವಾಟಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಅದನ್ನುಗಮನದಲ್ಲಿಟ್ಟುಕೊಂಡು ಮೆಟ್ರೊ ನಿಲ್ದಾಣಗಳಲ್ಲಿ ಈ ಪದ್ಧತಿ ಅಳವಡಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.