ಟೋಕಿಯೋದಲ್ಲಿ ಮೃತಪಟ್ಟ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ : ಸುಷ್ಮಾ ಸ್ವರಾಜ್
ಎರಡು ವಾರಗಳ ಹಿಂದೆ ಟೋಕಿಯೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ..

ನವದೆಹಲಿ: ಎರಡು ವಾರಗಳ ಹಿಂದೆ ಟೋಕಿಯೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಟೋಕಿಯೋದಲ್ಲಿ ಮೃತಪಟ್ಟ ಗೋಪಾಲ್ ರಾಮ್ ಪತ್ನಿ ಆರ್ಥಿಕವಾಗಿ ಬಲಹೀನರಾಗಿದ್ದು, ಟೋಕಿಯೋದಿಂದ ಶವ ವಾಪಸ್ ತರಲು ಸಹಾಯ ಮಾಡಬೇಕೆಂದು ಕಳೆದ ವಾರ ದೆಹಲಿ ಮಹಿಳಾ ಆಯೋಗ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿತ್ತು.
ಆಯೋಗದ ಮನವಿಗೆ ಸ್ಪಂದಿಸಿದ ಸುಷ್ಮಾ ಕೂಡಲೇ ಶವವನ್ನು ಭಾರತಕ್ಕೆ ತರಿಸಲು ಹಾಗೂ ಎಲ್ಲಾ ವೆಚ್ಚಗಳನ್ನು ಭರಿಸಲು ನಿರ್ದೇಶನ ನೀಡಿದ್ದರು. ಡಿಸೆಂಬರ್ 24 ರಂದು ಎಎನ್ಎ ವಿಮಾನದಲ್ಲಿ ಶವ ನವೆದಹಲಿಗೆ ತಲುಪಲಿದೆ ಎಂದು ಸುಷ್ಮಾ ಟ್ಟೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


