ನೋಟು ನಿಷೇಧ: ಮತ್ತೆ ಯೂಟರ್ನ್ ಹೊಡೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!
ನೋಟು ನಿಷೇಧದ ಕುರಿತಂತೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆಂಧ್ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮತ್ತೆ ಯೂಟರ್ನ್ ಹೊಡೆದಿದ್ದು, ತಾವೇನೂ ನೋಟು ನಿಷೇಧದ ವಿರುದ್ಧವಾಗಿಲ್ಲ. ಆದರೆ ಜನರ ಪರದಾಟದ ಕುರಿತಂತೆ ಕಳವಳಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಹೈದರಾಬಾದ್: ನೋಟು ನಿಷೇಧದ ಕುರಿತಂತೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆಂಧ್ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮತ್ತೆ ಯೂಟರ್ನ್ ಹೊಡೆದಿದ್ದು, ತಾವೇನೂ ನೋಟು ನಿಷೇಧದ ವಿರುದ್ಧವಾಗಿಲ್ಲ. ಆದರೆ ಜನರ ಪರದಾಟದ ಕುರಿತಂತೆ ಕಳವಳಗೊಂಡಿದ್ದೇನೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಗರಿಷ್ಠ ಮೌಲ್ಯದ ನೋಟುಗಳ ನಿಷೇಧ ನಮ್ಮ ಆಶಯ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ನಾಯ್ಡು, ಇದೀಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ. ನಿನ್ನೆ ತಾವು ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿದ್ದು, ತಾವು ನೋಟು ನಿಷೇಧವನ್ನು ವಿರೋಧಿಸಿರಲಿಲ್ಲ. ಆದರೆ ನೋಟು ನಿಷೇಧ ಜಾರಿಯಲ್ಲಾದ ಲೋಪದೋಷಗಳ ಕುರಿತು ಮಾತನಾಡಿದ್ದೇ ಅಷ್ಟೇ. ನೋಟು ನಿಷೇಧವಾಗಿ ಒಂದು ತಿಂಗಳಾದರೂ ಜನರ ಭವಣೆ ಮಾತ್ರ ನೀಗಿಲ್ಲ. ನಗದು ಕೊರತೆಯಿಂದಾಗಿ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಗಳ ಮುಂದೆ ನಿಂತ ಹಿರಿಯ ನಾಗರೀಕರು ಕುಸಿಯುತ್ತಿರುವ ಸುದ್ದಿಗಳನ್ನು ನೋಡಿದರೆ ತುಂಬಾ ದುಃಖವಾಗುತ್ತದೆ ಎಂದು ಹೇಳಿದ್ದಾರೆ.
ಹುಡ್ ಹುಡ್ ಚಂಡಮಾರುತದಂತಹ ವಿಷಮಕಾರಿ ಪರಿಸ್ಥಿತಿಯನ್ನೇ ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಆದರೆ ನೋಟು ನಿಷೇಧದ ಬಳಿಕ ಉಂಟಾದ ಬಿಕ್ಕಟ್ಟನ್ನು ಶಮನಗೊಳಿಸಲು ಆಗುತ್ತಿಲ್ಲ. ಕಾರಣ ಹೊಸ ನೋಟುಗಳ ಅಭಾವ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಇದೇ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಚಂದ್ರಬಾಬು ನಾಯ್ಡು ನೋಟಿನ ಬಿಕ್ಕಟ್ಟನ್ನು ಶಮನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


