ದೇಶ

ಜಯಲಲಿತಾಗೆ ಶ್ರದ್ದಾಂಜಲಿ ಸಲ್ಲಿಸಿದ, ರಾಷ್ಟ್ರಪತಿ, ಮೋದಿ ಹಾಗೂ ರಾಹುಲ್ ಗೆ ಧನ್ಯವಾದ ಹೇಳಿದ ಶಸಿಕಲಾ

ಇತ್ತೀಚೆಗೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಡಿಸೆಂಬರ್ 6ರಂದು ಚೆನ್ನೈ ಗೆ ಬಂದು ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಪ್ರಣಬ್ ...

ಜಯಲಲಿತಾಗೆ ಶ್ರದ್ದಾಂಜಲಿ ಸಲ್ಲಿಸಿದ, ರಾಷ್ಟ್ರಪತಿ, ಮೋದಿ ಹಾಗೂ ರಾಹುಲ್ ಗೆ ಧನ್ಯವಾದ ಹೇಳಿದ ಶಸಿಕಲಾ
ಶಸಿಕಲಾ
Published On :

ಚೆನ್ನೈ: ಇತ್ತೀಚೆಗೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಡಿಸೆಂಬರ್ 6ರಂದು ಚೆನ್ನೈ ಗೆ ಬಂದು ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜಯಾ ಆಪ್ತೆ ಶಸಿಕಲಾ ಧನ್ಯವಾದ ತಿಳಿಸಿದ್ದಾರೆ.

ಚೆನ್ನೈ ಗೆ ಬಂದು ನೀವು ಅಗಲಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಿಎಂ ಜಯಲಲಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೀರಿ, ನನಗೆ ವಯಕ್ತಿಕವಾಗಿ ಸಮಾಧಾನ ಹೇಳಿದ್ದಾರೆ. ಚೆನ್ನೈ ಗೆ ಬರಲು ನಿಮಗೆ ವಿಮಾನದಿಂದಾಗಿ ಸ್ವಲ್ಪ ತಡವಾಯಿತು, ನಿಮ್ಮ ಮಾತುಗಳು ನನಗೆ ಮತ್ತು ಲಕ್ಷಾಂತರ ತಮಿಳಿಗರಿಗೆ ಸಮಾಧಾನ ತಂದಿತು. ಇಲ್ಲಿಗೆ ಆಗಮಿಸಿದ್ದ ನಿಮಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸಿ, ಶಸಿಕಲಾ ರಾಷ್ಟ್ಪಪತಿ ಅವರಿಗೆ ಪತ್ರ ಬರೆದಿದ್ದಾರೆ.

ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು. ಚೆನ್ನೈಗೆ ಬಂದು ಜಯಲಲಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ನಿಮ್ಮ ಅಪ್ರತಿಮ ಗುಣವನ್ನು ತೋರಿಸುತ್ತದೆ. ನಿಮ್ಮ ಭೇಟಿ ನನಗೆ ಶಕ್ತಿ ತಂದಿತು ಎಂದು ತಿಳಿಸಿದ್ದಾರೆ.

ನಿಮ್ಮ ಕರುಣೆಯ ಮಾತುಗಳು ನನಗೆ ಮತ್ತು ತಮಿಳು ನಾಡು ಜನೆತೆಗೆ ದೊಡ್ಡ ಸಮಾಧಾನ ತಂದಿದೆ ಎಂದು ರಾಹುಲ್ ಗಾಂಧಿ ಅವರಿಗೂ ಶಸಿಕಲಾ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.