ದೇಶ

ನೋಟು ನಿಷೇಧ ಭ್ರಷ್ಟರ ವಿರುದ್ಧವಲ್ಲ, ಬಡ ರೈತರ ವಿರುದ್ಧ: ರಾಹುಲ್ ಗಾಂಧಿ

ಬಡ ರೈತರ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಣ್ಣು ಕುರುಡಾಗಿದೆ. ಕಿವಿ ಕೇಳಿಸುತ್ತಿಲ್ಲ ಎಂದು ದೂರಿದ್ದಾರೆ. ನವೆಂಬರ್ 8 ರ ನಿರ್ಣಯದ ನಂತರ ..

ನೋಟು ನಿಷೇಧ ಭ್ರಷ್ಟರ ವಿರುದ್ಧವಲ್ಲ, ಬಡ ರೈತರ ವಿರುದ್ಧ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಲಾಯಿತು, ಆದರೆ ಮೋದಿ ನಮಗೆ ಸಾಲ ಮನ್ನಾ ಮಾಡುವ ಯಾವುದೇ ಭರವಸೆ ನೀಡಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶದ ಜಾನ್ ಪುರದಲ್ಲಿ ನಡೆದ ಜನಾಕ್ರೋಶ್ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,ಬಡ ರೈತರ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಣ್ಣು ಕುರುಡಾಗಿದೆ. ಕಿವಿ ಕೇಳಿಸುತ್ತಿಲ್ಲ ಎಂದು ದೂರಿದ್ದಾರೆ. ನವೆಂಬರ್ 8 ರ ನಿರ್ಣಯದ ನಂತರ ವಿಜಯ್ ಮಲ್ಯಾಗೆ 1200 ಕೋಟಿ ರು ಮೌಲ್ಯದ ಚಾಕೋಲೇಟ್ ನೀಡಲಾಗಿದೆ.

ಪ್ರಧಾನಿ ವಿರುದ್ಧ ನಮ್ಮ ಹೋರಾಟ ರಾಜಕೀಯವಾದದ್ದು,  ಮೋದಿ ವಿರುದ್ಧ ಮುರ್ದಾಬಾದ್ ಎಂದು ಘೋಷಣೆ ಕೂಗುವುದು ಸರಿಯಲ್ಲ, ಅದು ಆರ್ ಎಸ್ ಎಸ್ ನವರ ಭಾಷೆ. ಕಾಂಗ್ರೆಸ್ ಭಾಷೆ ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ಎಲ್ಲಾ ಹಣ ಕಪ್ಪು ಹಣವಲ್ಲ, ಎಲ್ಲಾ ಕಪ್ಪು ಹಣ ಹಣವಲ್ಲ ಎಂದು ರಾಹುಲ್ ಹೇಳಿದ್ದಾರೆ. ನವೆಂಬರ್ 8 ರಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯ ಭ್ರಷ್ಟಾಚಾರ ವಿರುದ್ಧ ಅಲ್ಲ, ಬದಲಾಗಿ ಬಡ ರೈತರನ್ನು ಟಾರ್ಗೆಟ್ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.