ದೇಶ

ಬಿಜೆಪಿಯಂತೆ ಸೇನಾ ವಿಚಾರದಲ್ಲಿ ಎಂದಿಗೂ ರಾಜಕೀಯವಾಡಿಲ್ಲ, ಮುಂದೆ ಮಾಡುವುದೂ ಇಲ್ಲ: ಕಾಂಗ್ರೆಸ್

ಭಾರತೀಯ ಸೇನೆ ಮೇಲೆ ನಮಗೆ ಸಂಪೂರ್ಣವಾದ ವಿಶ್ವಾಸವಿದ್ದು, ಸೇನಾ ವಿಚಾರದಲ್ಲಿ ಬಿಜೆಪಿಯಂತೆ ನಾವು ಎಂದಿಗೂ ರಾಜಕೀಯ ಆಟ ಆಡಿಲ್ಲ. ಮುಂದೆ ಎಂದಿಗೂ ಆಡುವುದೂ ಇಲ್ಲ ಎಂದು ಕಾಂಗ್ರೆಸ್...

ಬಿಜೆಪಿಯಂತೆ ಸೇನಾ ವಿಚಾರದಲ್ಲಿ ಎಂದಿಗೂ ರಾಜಕೀಯವಾಡಿಲ್ಲ, ಮುಂದೆ ಮಾಡುವುದೂ ಇಲ್ಲ: ಕಾಂಗ್ರೆಸ್
ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ
Published On :

ಕೋಲ್ಕತಾ: ಭಾರತೀಯ ಸೇನೆ ಮೇಲೆ ನಮಗೆ ಸಂಪೂರ್ಣವಾದ ವಿಶ್ವಾಸವಿದ್ದು, ಸೇನಾ ವಿಚಾರದಲ್ಲಿ ಬಿಜೆಪಿಯಂತೆ ನಾವು ಎಂದಿಗೂ ರಾಜಕೀಯ ಆಟ ಆಡಿಲ್ಲ. ಮುಂದೆ ಎಂದಿಗೂ ಆಡುವುದೂ ಇಲ್ಲ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಭೂಸೇನಾ ಮುಖ್ಯಸ್ಥರಾಗಿ ಲೆ.ಜ. ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು, ಯಾವುದು ಮಾಡಬೇಕು ಹಾಗೂ ಯಾವುದು ಮಾಡಬಾರದುಎಂಬುದು ಕಾಂಗ್ರೆಸ್ ತಿಳಿಸಿದೆ. ಭಾರತೀಯ ಸೇನೆ ಮೇಲೆ ನಮಗೆ ಸಂಪೂರ್ಣವಾದ ವಿಶ್ವಾಸವಿದೆ. ಭಾರತೀಯ ಸೇನೆ ಸಾರ್ವಜನಿಕ ಸಂಸ್ಥೆಯಾಗಿದ್ದು, ಸೇನಾ ವಿಚಾರದಲ್ಲಿ ಬಿಜೆಪಿಯಂತೆ ನಾವು ಎಂದಿಗೂ ರಾಜಕೀಯ ಮಾಡಿಲ್ಲ ಎಂದು ಹೇಳಿದ್ದಾರೆ.

ಸೇನೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ ರಾವತ್ ಅವರನ್ನು ನೇಮಿಸಿರುವುದಕ್ಕೆ ವಿರೋಧ ಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ರಾವತ್ ಅವರನ್ನು ನೇಮಿಸಿರುವುದರ ಹಿಂದೆ ಏನಾದರೂ ಉದ್ದೇಶವಿದೆಯೇ? ಬಲವಾದ ಕಾರಣಗಳೇನಾದರೂ ಇವೇಯೇ ಎಂಬುದರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.