ದೇಶ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಲು ಜನರಿಗೆ ಒತ್ತಡ ಹೇರದಂತೆ ಮೋದಿಗೆ ಮನವಿ

ಕೇಂದ್ರ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಲು ಒತ್ತಡ ಹೇರಬಾರದು ಎಂದು ಮೋದಿ ಅವರಿಗೆ ಮನವಿ...

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಲು ಜನರಿಗೆ ಒತ್ತಡ ಹೇರದಂತೆ ಮೋದಿಗೆ ಮನವಿ
ನಗದು ರಹಿತ ವಹಿವಾಟು (ಸಂಗ್ರಹ ಚಿತ್ರ)
Published On :
ವಿಶಾಖಪಟ್ಟಣ: ಕೇಂದ್ರ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಲು ಒತ್ತಡ ಹೇರಬಾರದು ಎಂದು ಮಾಜಿ ಅಧಿಕಾರಿ ಇಎಎಸ್ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಇಎಎಸ್ ಶರ್ಮಾ, ಹ್ಯಾಕಿಂಗ್ ಅಪಾಯ ಇರುವುದರಿಂದ ನಗದು ರಹಿತ ವಹಿವಾಟು ನಡೆಸುವಂತೆ ಸಾರ್ವಜನಿಕರನ್ನು ಒತ್ತಾಯಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೇ ಈ ರೀತಿಯ ಪ್ರತಿ ವಹಿವಾಟಿನಲ್ಲೂ ಜನರು ಕಷ್ಟಪಟ್ಟು ಸಂಪಾದಿಸಿದ ಹಣದ ಒಂದು ಭಾಗ ನಗದು ರಹಿತ ವಹಿವಾಟುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೆ ಹೋಗುತ್ತದೆ, ಆದ್ದರಿಂದ ಸಾರ್ವಜನಿಕರ ಮೇಲೆ ಒತ್ತಡ ಹೇರಬಾರದು ಎಂದು ಇಎಎಸ್ ಶರ್ಮಾ ಮನವಿ ಮಾಡಿದ್ದಾರೆ. 
ನೋಟು ನಿಷೇಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪತ್ರಗಳನ್ನು ಬರೆದಿರುವ ಮಾಜಿ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ, ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ನೋಟು ನಿಷೇಧಕ್ಕೆ ಪೂರಕವಾಗಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರದೇ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನೋಟು ನಿಷೇಧ ಕ್ರಮವನ್ನು ಘೋಶಿಸಿದ ನಂತರ ಕೇಂದ್ರ ಸರ್ಕಾರ ಕಪ್ಪುಹಣ ಹೊಂದಿರುವ ತಿಮಿಂಗಿಲಗಳನ್ನು ಹಿಡಿಯಬೇಕಿತ್ತು. ಆದರೆ ಆ ಕೆಲಸ ಮಾಡಿಲ್ಲ ಎಂದು ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಇನ್ನು ಅಕ್ರಮವಾಗಿ ನೋಟುಗಳನ್ನು ಬದಲಾವಣೆ ಮಾಡಿಕೊಂಡಿರುವ ಆರೋಪ ಬಿಜೆಪಿ ಶಾಸಕ/ ಸಂಸದರ ವಿರುದ್ಧವೇ ಕೇಳಿಬಂದಿದ್ದರೂ ಅವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿಲ್ಲ, ಎಲ್ಲಿಯವರೆಗೂ ಪಕ್ಷಾತೀತವಾಗಿ ಭ್ರಷ್ಟರು, ಕಪ್ಪುಹಣ ಹೊಂದಿರುವವರನ್ನು ಹಿಡಿದು ಕಟಕಟೆಯಲ್ಲಿ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಜನರಿಗೆ ನೋಟು ನಿಷೇಧದ ಬಗ್ಗೆ ನಂಬಿಕೆ ಮೂಡುವುದಿಲ್ಲ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.