ಗ್ರಾಮಕ್ಕೆ ನುಗ್ಗಿ ಹಸುವನ್ನು ಕೊಂದ ಸಿಂಹ, ಆತಂಕದಲ್ಲಿ ಗ್ರಾಮಸ್ಥರು
ಗಿರ್ ಅಭಯಾರಣ್ಯದ ಸಮೀಪದ ವಿರ್ಪುರ್-ಗಧಿಯಾ ಗ್ರಾಮಕ್ಕೆ ನುಗ್ಗಿದ ಸಿಂಹಗಳು ಹಸುವೊಂದನ್ನು ಕೊಂದು ತಿಂದಿರುವ ಘಟನೆ ನಡೆದಿದ್ದು, ಸಿಂಹಗಳನ್ನು ಕಂಡು...

Published On :
ರಾಜ್ಕೋಟ್: ಗಿರ್ ಅಭಯಾರಣ್ಯದ ಸಮೀಪದ ವಿರ್ಪುರ್-ಗಧಿಯಾ ಗ್ರಾಮಕ್ಕೆ ನುಗ್ಗಿದ ಸಿಂಹಗಳು ಹಸುವೊಂದನ್ನು ಕೊಂದು ತಿಂದಿರುವ ಘಟನೆ ನಡೆದಿದ್ದು, ಸಿಂಹಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಳ್ಳಂಬೆಳಗ್ಗೆ ಸಿಂಹಗಳು ಗ್ರಾಮಕ್ಕೆ ನುಗ್ಗಿದೆ. ಮನೆ ಪಕ್ಕ ಕಟ್ಟಿಹಾಕಿದ್ದ ಹಸುವಿನ ಮೇಲೆ ದಾಳಿ ಮಾಡಿದ ಸಿಂಹಗಳು ಹಸುವನ್ನು ತಿಂದು ತೇಗಿದೆ. ಇನ್ನು ಸಿಂಹಗಳನ್ನು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗ್ರಾಮಸ್ಥರು ತಮ್ಮ ಮನೆಗಳ ಮೇಲೆ ನಿಂತು ವೀಕ್ಷಿಸಿದ್ದಾರೆ. ಮನೆ ಮಾಳಿಗೆ ಮೇಲೆ ನಿಂತು ಜನರು ಕೂಗುತ್ತಿದ್ದರಿಂದ ಹೆದರಿದ ಸಿಂಹಗಳು ಅತ್ತಿಂದಿತ್ತ ಓಡಾಡಿದ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿತ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಗ್ರಾಮದಲ್ಲಿ ಸಿಂಹಗಳನ್ನು ಪ್ರತ್ಯಕ್ಷವಾಗಿರುವುದನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸಿಂಹಗಳನ್ನು ಕಾಡಿಗೆ ಅಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


