ತೆರಿಗೆಯಿಂದಾಗಿ ಸರ್ಕಾರ 2-3 ಲಕ್ಷ ಕೋಟಿ ರು. ಹಣ ಸಂಗ್ರಹಿಸಲಿದೆ: ಮನೋಹರ್ ಪರಿಕ್ಕರ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ನೀತಿಯಿಂದಾಗಿ ಸರ್ಕಾರ ತೆರಿಗೆಯಿಂದ ಸುಮಾರು 2-3 ಲಕ್ಷ ಕೋಟಿ ರು ಹಣ ಸಂಗ್ರಹಿಸಲಿದೆ ಎಂದು ...

ಪಣಜಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ನೀತಿಯಿಂದಾಗಿ ಸರ್ಕಾರ ತೆರಿಗೆಯಿಂದ ಸುಮಾರು 2-3 ಲಕ್ಷ ಕೋಟಿ ರು ಹಣ ಸಂಗ್ರಹಿಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ದಕ್ಷಿಣ ಗೋವಾದಲ್ಲಿ ಆಯೋಜಿಸಿದ್ದ ಪಕ್ಷದ ಸಭೆಯಲ್ಲಿ ಮಾತನಾಡಿದ ಪರಿಕ್ಕರ್, ಕನಿಷ್ಠ ಪಕ್ಷ 2-3 ಲಕ್ಷ ಕೋಟಿ ರು ಹಣ ತೆರಿಗೆಯಿಂದ ಬರುತ್ತದೆ. ಈ ಹಣವನ್ನು ಬಡ ಹಾಗೂ ಸಾಮಾನ್ಯ ಜನರ ಅವಶ್ಯಕತೆಗಳನ್ನು ಪೂರೈಸಿ, ಅವರನ್ನು ಆರ್ಥಿಕವಾಗಿ ಸಬಲಗೊಳಿಸಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಹೇಳಲಾಗಿದೆ.
ಅನಾಣ್ಯೀಕರಣದ ಪ್ರಮುಖ ಉದ್ದೇಶ, ಭಾರತೀಯ ಆರ್ಥಿಕತೆಯನ್ನು ಸದೃಢಗೊಳಿಸುವುದಾಗಿತ್ತು, ಸರ್ಕಾರದ ಈ ನಡೆಯಿಂದ ಈಗಾಗಲೇ ಕಪ್ಪುಹಣ ಕೂಡಿಟ್ಟಿರುವವರಿಂದ ಅಪಾರ ಪ್ರಮಾಣದ ಹಣ ಸರ್ಕಾರಕ್ಕೆ ಬಂದಿದೆ.
ಕೂಡಿಟ್ಟಿರುವ ಎಲ್ಲಾ ಕಪ್ಪು ಹಣ ವಾಪಸ್ ಬರಬೇಕು ಎಂದ ಅವರು, ಇದುವರೆಗೂ ಸುಮಾರು 800 ಕೋಟಿ ರು. ಕಪ್ಪು ಹಣ ಸಿಕ್ಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


