ದೇಶ

ರಾಷ್ಟ್ರಗೀತೆ ವಿವಾದ: ನಿರ್ದೇಶಕ ಕಮಲ್ ಹೇಳಿಕೆಯನ್ನು ಬೆಂಬಲಿಸಿದ ಕೇರಳ ಸಿಎಂ

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂಬ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದ್ದು ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷ ಹಾಗೂ ಮಲಯಾಳಂ...

ರಾಷ್ಟ್ರಗೀತೆ ವಿವಾದ: ನಿರ್ದೇಶಕ ಕಮಲ್ ಹೇಳಿಕೆಯನ್ನು ಬೆಂಬಲಿಸಿದ ಕೇರಳ ಸಿಎಂ
ಪಿಣರಾಯಿ ವಿಜಯನ್
Published On :
ಕೋಳಿಕೋಡ್: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂಬ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದ್ದು ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷ ಹಾಗೂ ಮಲಯಾಳಂ ಚಲನಚಿತ್ರರಂಗದ ನಿರ್ದೇಶಕ ಕಮಲ್ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲಿಸಿದ್ದಾರೆ. 
ಸಂಘಪರಿವಾರದ ಜನರು ಕೋಮುವಾದ ಮತ್ತು ಅಸಹಿಷ್ಣುತೆಯನ್ನು ಕೆರಳಿಸಲು ರಾಷ್ಟ್ರಗೀತೆಯನ್ನು ಬಳಸಲಾಗುತ್ತಿದ್ದು ಕೇರಳದಲ್ಲಿ ಸಂಘಪರಿವಾರದವರ ಆಟ ನಡೆಯಲಾರದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. 
ರಾಷ್ಟ್ರಗೀತೆ ಕುರಿತಂತೆ ಕಮಲ್ ಅವರ ಹೇಳಿಕೆಯಿಂದ ಕೆರಳಿಸಿರುವ ಸಂಘಪರಿವಾರದವರು ಕಮಲ್ ನಿವಾಸದೆದುರು ಪ್ರತಿಭಟನೆ ನಡೆಸುತ್ತಿದ್ದು ಸಂಘಪರಿವಾರ ಪ್ರತಿಭಟನೆ ಮೂಲಕ ವಿಷಯವನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಲಾಭಗಳಿಸಲು ಶ್ರಮಿಸುತ್ತಿದೆ ಎಂದರು. 
ರಾಷ್ಟ್ರಗೀತೆ ಕುರಿತಂತೆ ಕೇರಳದಲ್ಲಿ ಸಮಸ್ಯೆ ಸೃಷ್ಠಿಸುವವರನ್ನು ಸರ್ಕಾರ ಮಟ್ಟಹಾಕಲಿದೆ ಎಂದು ಪಿಣರಾಯಿ ವಿಜಯ್ ಎಚ್ಚರಿಕೆಯನ್ನು ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.