ದೇಶ

ರಾಜಸ್ಥಾನದಲ್ಲಿ ವಸುಂಧರಾ ರಾಜೆಯಿಂದ 'ಅನ್ನಪೂರ್ಣ ರಸೋಯಿ' ಆರಂಭ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಿ.ಜಯಲಲಿತಾ ಅವರು ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ನಿಂದ ಪ್ರೇರಣೆ ಪಡೆದ ರಾಜಸ್ಥಾನ ಮುಖ್ಯಮಂತ್ರಿ...

ರಾಜಸ್ಥಾನದಲ್ಲಿ ವಸುಂಧರಾ ರಾಜೆಯಿಂದ 'ಅನ್ನಪೂರ್ಣ ರಸೋಯಿ' ಆರಂಭ
ಮಹಿಳೆ ತಿಂಡಿ ತಿನ್ನಿಸುತ್ತಿರುವ ವಸುಂಧರಾ ರಾಜೆ
Published On :
ಜೈಪುರ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಿ.ಜಯಲಲಿತಾ ಅವರು ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ನಿಂದ ಪ್ರೇರಣೆ ಪಡೆದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ರಾಜ್ಯದ ಜನತೆಗೆ ಅತಿ ಕಡಿಮೆ ಬೆಲೆಗೆ ಆಹಾರ ನೀಡಲು ಅನ್ನಪೂರ್ಣ ರಸೋಯಿಗಳನ್ನು ಆರಂಭಿಸಿದ್ದಾರೆ.
ವಸುಂಧರಾ ರಾಜೆ ಅವರು ಬಡವರಿಗಾಗಿ ತಮ್ಮದೇ ಬ್ರಾಂಡ್ ನ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದು, ಇಲ್ಲಿ ಐದು ರುಪಾಯಿಗೆ ತಿಂಡಿ ಹಾಗೂ 8 ರುಪಾಯಿಗೆ ಊಟ ದೊರೆಯಲಿದೆ.
ಇಬ್ಬರು ದಲಿತ ಮಹಿಳೆಯರಿಗೆ ತಿಂಡಿ ತಿನ್ನಿಸುವ ಮೂಲಕ ವಸುಂಧರಾ ರಾಜೆ ಅವರು ಅನ್ನಪೂರ್ಣ ರಸೋಯಿಗೆ ಗುರುವಾರ ಚಾಲನೆ ನೀಡಿದ್ದಾರೆ.
ಅನ್ನಪೂರ್ಣ ರಸೋಯಿ ಆಹಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಭಾರಿ ಸಬ್ಸಿಡಿ ನೀಡುತ್ತಿದ್ದು, ಇದರಿಂದ ರಾಜ್ಯ ಸರ್ಕಾರ ಮುಂದಿನ ಹಣಕಾಸು ವರ್ಷದವರೆಗೆ ನಾಲ್ಕು ಕೋಟಿ ರುಪಾಯಿ ವರೆಗೆ ವೆಚ್ಚವಾಗಲಿದೆ.
ನಗರದಲ್ಲಿರುವ ಬಡವರಿಗೆ ಅತಿ ಕಡಿಮೆ ಬೆಲೆಗೆ ಆಹಾರ ನೀಡುವುದು ನಮ್ಮ ಉದ್ದೇಶವಾಗಿದ್ದು, ಸದ್ಯ 12 ಜಿಲ್ಲೆಗಳಲ್ಲಿ 80 ವಾಹನಗಳ ಮೂಲಕ ಆಹಾರ ಒದಗಿಸಲಾಗುವುದು ಎಂದು ವಸುಂಧರಾ ರಾಜೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.