ತಾಲೀಬಾನ್ ನೊಂದಿಗೆ ಮಾತುಕತೆ ನಡೆಸಲು ಮುಂದಾದ ರಷ್ಯಾ, ಇರಾನ್ ಗೆ ಭಾರತ ಎಚ್ಚರಿಕೆ
ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅಶಾಂತಿಯ ಪರಿಸ್ಥಿತಿಯನ್ನು ಬದಲಾಯಿಸಲು ರಷ್ಯಾ, ಇರಾನ್ ನಂತಹ ರಾಷ್ಟ್ರಗಳು ಚಿಂತನೆ ನಡೆಸಿವೆ.

Published On :
ನವದೆಹಲಿ: ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅಶಾಂತಿಯ ಪರಿಸ್ಥಿತಿಯನ್ನು ಬದಲಾಯಿಸಲು ರಷ್ಯಾ, ಇರಾನ್ ನಂತಹ ರಾಷ್ಟ್ರಗಳು ಚಿಂತನೆ ನಡೆಸಿವೆ. ಆದರೆ ಈ ನಡೆಗೆ ಭಾರತ ವಿರೊಧ ವ್ಯಕ್ತಪಡಿಸಿದ್ದು, ರಷ್ಯಾ, ಇರಾನ್ ಗೆ ಎಚ್ಚರಿಕೆ ನೀಡಿದೆ.
ತಾಲೀಬಾನ್ ಉಗ್ರ ಸಂಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾದ ಕೆಂಪು ರೇಖೆಯನ್ನು ಮಾನ್ಯ ಮಾಡಬೇಕು, ಭಯೋತ್ಪಾದನೆ, ದೌರ್ಜನ್ಯಗಳನ್ನು ಬಿಡಬೇಕು ಹಾಗೂ ಅಲ್-ಖೈದಾ ಉಗ್ರ ಸಂಘಟನೆಯೊಂದಿಗಿನ ನಂಟನ್ನು ಕಳಚಿ ಪ್ರಜಾಸತ್ತಾತ್ಮಕ ನಿಯಮಗಳನ್ನು ಒಪ್ಪಿಕೊಳ್ಳಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ತನ್ನ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿರುವ ರಷ್ಯಾಗೂ ಭಾರತ ಇದೇ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದು, ಭಾರತಕ್ಕೆ ರಷ್ಯಾ ಆಪ್ತ ರಾಷ್ಟ್ರವಾಗಿದ್ದರೂ, ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ರಷ್ಯಾದ ನಡೆಗೆ ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿದ್ದು, ರಷ್ಯಾದ ನಡೆಯಿಂದ ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗುವಂತೆ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ರಷ್ಯಾ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕಿಲ್ಲ. ಆದರೆ ರಷ್ಯಾದ ಇತ್ತೀಚಿನ ನಡೆಯಿಂದ ಭಾರತ ಗೊಂದಲಕ್ಕಿಡಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. ರಷ್ಯಾದ ಮಾದರಿಯಲ್ಲೇ ಇರಾನ್ ಸಹ ತಾಲೀಬಾನ್ ನೊಂದಿಗೆ ರಾಜಕೀಯ ಮಾತುಕತೆ ನಡೆಸಲು ಮುಂದಾಗಿದ್ದು ಅಫ್ಘಾನಿಸ್ತಾನದಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ದೂರವಿಡಲು ಈ ಮೂಲಕ ಯತ್ನಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


