ಮಗಳ ಅದ್ಧೂರಿ ಮದುವೆ ಬದಲಿಗೆ ಅದೇ ಹಣದಲ್ಲಿ ಬಡವರಿಗೆ 90 ಮನೆ ಕಟ್ಟಿಕೊಟ್ಟ ಉದ್ಯಮಿ
ಯುವ ಬಿಜೆಪಿ ಶಾಸಕ ಪ್ರಶಾಂತ್ ಬ್ಯಾಂಬ್ ಅವರಿಂದ ಸ್ಫೂರ್ತಿ ಪಡೆದ ಉದ್ಯಮಿಯೊಬ್ಬರು ಮಗಳ ಅದ್ಧೂರಿ ಮದುವೆ ಬದಲಿಗೆ ಅದೇ ದುಡ್ಡಲ್ಲಿ ಬಡವರಿಗೆ...

Published On :
ಔರಂಗಾಬಾದ್: ಯುವ ಬಿಜೆಪಿ ಶಾಸಕ ಪ್ರಶಾಂತ್ ಬ್ಯಾಂಬ್ ಅವರಿಂದ ಸ್ಫೂರ್ತಿ ಪಡೆದ ಉದ್ಯಮಿಯೊಬ್ಬರು ಮಗಳ ಅದ್ಧೂರಿ ಮದುವೆ ಬದಲಿಗೆ ಅದೇ ದುಡ್ಡಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟಿರುವ ಅಪರೂಪದ ಘಟನೆ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ ಉದ್ಯಮಿ ಮನೋಜ್ ಮುನ್ನೊಟ್ ಎಂಬುವರು ಅದ್ಧೂರಿಯಾಗಿ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದರು. ಸುಮಾರು 70 ರಿಂದ 80 ಲಕ್ಷ ರುಪಾಯಿ ವೆಚ್ಚ ಮಾಡಲು ಮುಂದಾಗಿದ್ದ ಮನೋಜ್ ಅವರು ಮಗಳ ಮದುವೆಗೆ ದುಂದುವೆಚ್ಚ ಮಾಡುವ ಬದಲು ಬಡವರಿಗೆ ಮನೆ ಕಟ್ಟಿಕೊಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಅದರಂತೆ ಸುಮಾರು 90 ಮನೆಗಳನ್ನು ನಿರ್ಮಿಸಿ ಬಡವರಿಗೆ ದಾನ ಮಾಡಿ ಮಗಳಿಗೆ ಖುಷಿಯ ಕಾಣಿಕೆ ನೀಡಿದ್ದಾರೆ. ತಂದೆಯನ್ನು ನಿರ್ಧಾರವನ್ನು ಪುತ್ರಿ ಶ್ರೇಯಾ ಸಹ ಮನಸ್ಪೂರ್ತಿಯಾಗಿ ಒಪ್ಪಿದ್ದಾರೆ. ಇತ್ತೀಚೆಗೆ ಶ್ರೀಮಂತರು ತಮ್ಮ ಮಗಳ ಮದುವೆಗಾಗಿ ಕೋಟಿ ಕೋಟಿ ವೆಚ್ಚ ಮಾಡುತ್ತಿದ್ದರೆ ಇಲ್ಲಿ ಉದ್ಯಮಿಯೊಬ್ಬರು ಮನೆಗಳನ್ನು ಕಟ್ಟಿಸಿಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


