ಮುಂಬೈ ನಲ್ಲಿ ಹೆಲಿಕಾಫ್ಟರ್ ಅಪಘಾತ: ಎರಡು ಸಾವು
ಮುಂಬೈ ನ ಗೋರೆಗಾಂವ್ ನ ಆರೆ ಕಾಲೋನಿಯಲ್ಲಿ ಹೆಲಿಕಾಫ್ಟರ್ ಪತನಗೊಂಡಿದ್ದು ನಾಲ್ವರಿಗೆ ಗಂಭೀರ ಗಾಯಗಳುಂಟಾಗಿವೆ.

Published On :
ಮುಂಬೈ: ಮುಂಬೈ ನ ಗೋರೆಗಾಂವ್ ನ ಆರೆ ಕಾಲೋನಿಯಲ್ಲಿ ಹೆಲಿಕಾಫ್ಟರ್ ಪತನಗೊಂಡಿದ್ದು ಮೂವರಿಗೆ ಗಂಭೀರ ಗಾಯಗಳುಂಟಾಗಿದ್ದರೆ ಇಬ್ಬರು ಮೃತಪಟ್ಟಿದ್ದಾರೆ.
ಡಿ.11 ರಂದು ರಾಬಿನ್ ಸನ್ ಆರ್ 44 ಹೆಲಿಕಾಫ್ಟರ್ ಪತನಗೊಂಡಿದ್ದು ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. 1992 ರಲ್ಲಿ ತಯಾರಾಗಿದ್ದ ರಾಬಿನ್ ಸನ್ ಆರ್ 44 ಹೆಲಿಕಾಫ್ಟರ್ ಪವನ್ ಹಂಸ್ ಎಂಬುವವರ ಬಳಿ ಇತ್ತು. ಆದರೆ ಅದನ್ನು ಖರೀದಿಸಿದ್ದ ಖಾಸಗಿ ಏವಿಯೇಶನ್ ಕಂಪನಿ ದುರಸ್ತಿ ಮಾಡಿಸಿ ಹೆಲಿಕಾಪ್ಟರ್ ಜಾಯ್ ರೈಡ್ ಗೆ ಮಾತ್ರ ಬಳಕೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎರಡು ಫೈರ್ ಇಂಜಿನ್ ಗಳು ಧಾವಿಸಿದ್ದು ಅಪಘಾತದಿಂದ ಉಂಟಾಗಿದ್ದ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


