ದೇಶ

ಛತ್ತೀಸ್ಗಢ: ನಾಲ್ವರು ನಕ್ಸಲರು, ಮೂವರು ಬೆಂಬಲಿಗರ ಬಂಧನ

ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ನಾಲ್ವರು ನಕ್ಸಲರು ಹಾಗೂ ಮೂವರು ಬೆಂಬಲಿಗರನ್ನು ಅಧಿಕಾರಿಗಳು ಬಂಧಕ್ಕೊಳಪಡಿಸಿದ್ದಾರೆ...

ಛತ್ತೀಸ್ಗಢ: ನಾಲ್ವರು ನಕ್ಸಲರು, ಮೂವರು ಬೆಂಬಲಿಗರ ಬಂಧನ
ಸಾಂದರ್ಭಿಕ ಚಿತ್ರ
Published On :

ರಾಯ್ಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ನಾಲ್ವರು ನಕ್ಸಲರು ಹಾಗೂ ಮೂವರು ಬೆಂಬಲಿಗರನ್ನು ಅಧಿಕಾರಿಗಳು ಬಂಧಕ್ಕೊಳಪಡಿಸಿದ್ದಾರೆ.

ಬೆದ್ರೆ ಪ್ರದೇಶದಲ್ಲಿರುವ ಮಾರುಕಟ್ಟೆ ಪ್ರದೇಶವೊಂದಕ್ಕೆ ನಕ್ಸಲರು ಭೇಟಿ ನೀಡುತ್ತಿದ್ದಾರೆಂಬ ಖಚಿತ ಮಾಹಿತಿ ದೊರಕುತ್ತಿದ್ದಂತೆ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ಕಾರ್ಯಾಚರಣೆ ವೇಳೆ ನಾಲ್ವರು ನಕ್ಸಲರನ್ನು ಬಂಧಿಸಿರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.

ನಕ್ಸಲರಿಗೆ ಸಹಾಯ ಮಾಡಿ ಅವರಿಗೆ ರು.1 ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ಮೂವರು ಬೆಂಬಲಿಗರನ್ನು ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಶುಕ್ಲಾ ಅವರು ಹೇಳಿದ್ದಾರೆ.

ಬಂಧಿತ ನಕ್ಸಲರನ್ನು ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ಮುಖ್ಯಸ್ಥ ಡೋಲಿ ಮಜ್ಜಿ (45), ಸೋಮ್ದು ತತಿ (28), ಕರ್ವೆ ಮಜ್ಜಿ ಎಂದು ಗುರ್ತಿಸಲಾಗಿದೆ.

ವಿಚಾರಣೆ ವೇಳೆ ಬಂಧಿತ ನಕ್ಸಲರು ಹಲವು ಸ್ಫೋಟ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾರ್ಕೆಲಿ ಪೊಲೀಸ್ ಕ್ಯಾಂಪ್ ಮೇಲೆ ಸಂಚು ರೂಪಿಸಲಾಗಿದ್ದು ಎಂದು ಹೇಳಿಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ನಕ್ಸಲರಿಗೆ ಸಹಾಯ ಮಾಡಿ ಬಂಧನಕ್ಕೊಳಗಾಗಿರುವವರನ್ನು ಹೆಮ್ಲಾ ಬುದ್ಧು (35), ಆಯ್ತು ಕುಡಿಯಮ್ (30) ಮತ್ತು ಉರ್ಸಾ ಬುಧ್ರಾಮ್ (35) ಎಂದು ಗುರ್ತಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.