ಅಸ್ಸಾಂ: 20 ಲಕ್ಷ ರೂ ಮೊತ್ತದ ಹೊಸ ನೋಟುಗಳನ್ನು ಹೊಂದಿದ್ದ ಮೂವರ ಬಂಧನ
ಕಮಿಷನ್ ಗಾಗಿ ಹಳೆಯ ನೋಟುಗಳನ್ನು ಅಕ್ರಮವಾಗಿ 2,000 ರೂ ನೋಟುಗಳಿಗೆ ಬದಲಾವಣೆ ಮಾಡಿದ ಆರೋಪದಡಿ ಅಸ್ಸಾಂ ನಲ್ಲಿ 3 ಜನರನ್ನು ಬಂಧಿಸಲಾಗಿದೆ.

Published On :
ಗುವಾಹಟಿ: ಕಮಿಷನ್ ಗಾಗಿ ಹಳೆಯ ನೋಟುಗಳನ್ನು ಅಕ್ರಮವಾಗಿ 2,000 ರೂ ನೋಟುಗಳಿಗೆ ಬದಲಾವಣೆ ಮಾಡಿದ ಆರೋಪದಡಿ ಅಸ್ಸಾಂ ನಲ್ಲಿ 3 ಜನರನ್ನು ಬಂಧಿಸಲಾಗಿದೆ.
ಹಟಿಗಾಂವ್ ಪ್ರದೇಶದ ಮನೆಯಲ್ಲಿದ್ದ ಮೂವರನ್ನು ಬಂಧಿಸಲಾಗಿದ್ದು, 20 ಲಕ್ಷ ರೂ ಮೊತ್ತದ 2000 ರೂ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಮೂರು ಜನರ ತಂಡ ನಡೆಸಿರುವ ಅಕ್ರಮದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹಂಟಿಗಾಂವ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಲಾಯಿತು. ಬಂಧಿತ ವ್ಯಕ್ತಿಗಳು ಮತ್ತೊಂದು ತಂಡಕ್ಕೆ ಸುಮಾರು 26 ಲಕ್ಷ ರೂಪಾಯಿ ಮೊತ್ತದ ಹಳೆಯ ನೋಟುಗಳನ್ನು ಕಮಿಷನ್ ಪಡೆದು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಲು ಉದ್ದೇಶಿಸಿದ್ದರು. ಈ ಪೈಕಿ ಈಗಾಗಲೇ 2೦ ಲಕ್ಷ ರೂಪಾಯಿಯಷ್ಟು ಮೊತ್ತದ ಹಣವನ್ನು ಬದಲಾವಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬ್ಯಾಂಕ್ ನ ಅಧಿಕಾರಿಗಳೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


