ದೇಶ

ಹೈದರಾಬಾದ್ ಕಟ್ಟಡ ಕುಸಿತ: 11ಕ್ಕೇರಿದ ಸಾವಿನ ಸಂಖ್ಯೆ, ಬಿಲ್ಡರ್ ಬಂಧನ

ತೆಲಂಗಾಣದ ಹೈದರಾಬಾದ್ ನ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದ್ದು, ದುರಂತಕ್ಕೆ ಕಾರಣನಾದ ಬಿಲ್ಡರ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ಕಟ್ಟಡ ಕುಸಿತ: 11ಕ್ಕೇರಿದ ಸಾವಿನ ಸಂಖ್ಯೆ, ಬಿಲ್ಡರ್ ಬಂಧನ
ಹೈದರಾಬಾದ್ ಕಟ್ಟಡ ದುರಂತ
Published On :

ಹೈದರಾಬಾದ್‌: ತೆಲಂಗಾಣದ ಹೈದರಾಬಾದ್ ನ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದ್ದು, ದುರಂತಕ್ಕೆ ಕಾರಣನಾದ ಬಿಲ್ಡರ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಗುರುವಾರ ರಾತ್ರಿ 9 ಗಂಟೆಯ ಸುಮಾರಿನಲ್ಲಿ ಸೈಬರಾಬಾದ್ ನ ನಾನಕ್ರಾಮ್ ಗೂಡದಲ್ಲಿದ್ದ 7 ಅಂತಸ್ತಿನ ವಸತಿ ಕಟ್ಟಡ ಕುಸಿದಿತ್ತು. ಈ ವೇಳೆ ಅಲ್ಲಿದ್ದ ಕಾರ್ಮಿಕರು ಮತ್ತು ಅವರ ಕುಟುಂಬದವರು ಕಟ್ಟಡದ ಕೆಳಗೆ ಸಿಕ್ಕಿ  ಹಾಕಿಕೊಂಡಿದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಈ ವರೆಗೂ 11 ಶವಗಳನ್ನು ಹೊರ ತೆಗೆದಿದ್ದಾರೆ.  ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಓರ್ವ ಮಹಿಳೆ ಮತ್ತು ಒಂದು ಮಗುವನ್ನು ನಿನ್ನೆ  ಜೀವಂತವಾಗಿ ಮೇಲಕ್ಕೆತ್ತಲಾಗಿತ್ತು. ಇಂದು ಅಂತಿಮ ಶವ ಪತ್ತೆಯಾಗುವುದರೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಎಲ್ಲ 11 ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಸಂಬಂಧಿಕರ ಗ್ರಾಮಗಳಿಗೆ ರವಾನಿಸಲಾಗುತ್ತದೆ ಎಂದು ಗ್ರೇಟರ್‌ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಶನ್‌ನ ಡೆಪ್ಯುಟಿ ಮೇಯರ್‌ ಬಾಬಾ  ಫೈಸುದ್ದೀನ್‌ ತಿಳಿಸಿದ್ದಾರೆ.

ಬಿಲ್ಡರ್ ಬಂಧನ
ಇದೇ ವೇಳೆ ದುರಂತಕ್ಕೆ ಕಾರಣನಾದ ಬಿಲ್ಡರ್ ಸತ್ಯನಾರಾಯಣ ಸಿಂಗ್ ಎಂಬಾತನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ದುರಂತದ ಬಳಿಕ ಈತ ಕೇರಳಕ್ಕೆ ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಈತನ  ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳದಲ್ಲೇ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.