ಎಲ್ಲರು ಸಂಸತ್ತಿನಿಂದ ಹೊರಗಿರುವಾಗ ಭೂಕಂಪವಾಗಲಿ: ರಾಹುಲ್ ಕಾಲೆಳೆದ ಬಿಜೆಪಿ ನಾಯಕರು
ಎಲ್ಲರೂ ಸಂಸತ್ತಿನಿಂದ ಹೊರಗಿರುವ ಭೂಕಂಪವಾಗಲಿ ಎಂದು ನಾನು ಬಯಸುತ್ತೇನೆ ಎಂದು ವೆಂಕಯ್ಯ ನಾಯ್ದು ಪ್ರತಿಕ್ರಿಯಿಸಿದ್ದಾರೆ....

ನವದೆಹಲಿ: ನೋಟು ನಿಷೇಧದ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಿದರೇ ಭೂಕಂಪವಾಗುತ್ತದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಹೇಳಿಕೆಗೆ ಹಲವು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
ಎಲ್ಲರೂ ಸಂಸತ್ತಿನಿಂದ ಹೊರಗಿರುವ ಭೂಕಂಪವಾಗಲಿ ಎಂದು ನಾನು ಬಯಸುತ್ತೇನೆ ಎಂದು ವೆಂಕಯ್ಯ ನಾಯ್ದು ಪ್ರತಿಕ್ರಿಯಿಸಿದ್ದಾರೆ. ಕಪ್ಪು ಹಣ ತಡೆಗಟ್ಟುವುದು ತಪ್ಪೇ ಎಂದು ನಾಯ್ಡು ಪ್ರಶ್ನಿಸಿರುವ ಅವರು ಮೋದಿ ಅವರನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಭಾಷಣ ಅವರ ಪಕ್ಷದ ಒಳಗೆ ಭೂಕಂಪನ ಮಾಡುತ್ತದೆಯೇ ಹೊರತು ಹೊರಗಡೆಯಲ್ಲ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಟಾಂಗ್ ನೀಡಿದ್ದಾರೆ.
ನಾವು ರಾಹುಲ್ ಗಾಂಧಿ ಭಾಷಣ ಕೇಳಲು ಇಷ್ಟ ಪಡುತ್ತೇವೆ. ಒಂದು ವೇಳೆ ಅವರಿಗೆ ಮಾತನಾಡು ಆಗದಿದ್ದರೇ ಬರೆದುಕೊಂಡು ಬಂದಿರುವ ಸ್ಕ್ರಿಪ್ಟ್ ಓದಲಿ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ರಾಹುಲ್ ಗಾಂಧಿ ಕಾಲೆಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


