ಒಂದೇ ಒಂದು ವೋಟಿನಿಂದ ವಾಜಪೇಯಿ ಸರ್ಕಾರ ಕೆಡವಿದ್ದ ಜಯಲಲಿತಾ
1998ರ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಧಾನ ಗೆದ್ದಿದ್ದ ಜಯ ಕಿಂಗ್ ಮೇಕರ್ ಆಗಿದ್ದರು. ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿ ಕೇಂದ್ರದಲ್ಲಿ ಬಿಜೆಪಿ ...

ಚೆನ್ನೈ: ಭಾರತದ ರಾಜಕೀಯದಲ್ಲಿ ವರ್ಣರಂಜಿತ ವ್ಯಕ್ತಿತ್ವದ ನಾಯಕಿಯೆಂದು ಗುರುತಿಸಿಕೊಂಡಿದ್ದ ಜಯಲಲಿತಾ ಈಗ ಇತಿಹಾಸ.
1998ರ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಧಾನ ಗೆದ್ದಿದ್ದ ಜಯ ಕಿಂಗ್ ಮೇಕರ್ ಆಗಿದ್ದರು. ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಜಯಲಲಿತಾ ಕಾರಣವಾಗಿದ್ದರು. 1999ರ ಏಪ್ರಿಲ್ 17ರಂದು ನಡೆದ ವಿಶ್ವಾಸಮತ ಯಾಚನೆಗಿಂತ ರೋಚಕ ಘಟನೆ ಮತ್ತೂಂದು ಇರಲಿಕ್ಕಿಲ್ಲ.
ಪದೇ ಪದೇ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದ ಜಯಲಲಿತಾ 13 ತಿಂಗಳ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 1 ಮತದಿಂದ ಅಧಿಕಾರ ಕಳೆದು ಕೊಳ್ಳುವಂತೆ ಮಾಡಿದರು. ಹೀಗೆ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಐಎಡಿಎಂಕೆ ನಾಯಕಿ ಜಯಲಲಿತಾ.
ಕೇಂದ್ರ ಸರ್ಕಾರ ತನ್ನ ಬೇಡಿಕೆಯನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅವರು ಕೇಂದ್ರ ಸರ್ಕಾರವನ್ನೇ ಉರುಳಿಸಿದರು. ಇನ್ನೊಂದು ವಿಶೇಷವೆಂದರೆ ಅಂದು ಬಿಜೆಪಿ ಸರ್ಕಾರ ಬೀಳಲು ಕಾರಣವಾದವರಲ್ಲಿ ಜಯಲಲಿತಾ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಬಿಜೆಪಿ ಸಂಸದರಾಗಿರುವ ಸುಬ್ರಮಣಿಯನ್ ಸ್ವಾಮಿ ಒಬ್ಬರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


