ದೇಶ

ಚೆನ್ನೈ: ಎಂಜಿಆರ್ ಸ್ಮಾರಕದಲ್ಲೇ ಜಯಲಲಿತಾ ಸಮಾಧಿಗೆ ನಿರ್ಧಾರ

ಜಯಲಲಿತಾ ಅವರ ಅಂತ್ಯಕ್ರಿಯೆ ವಿಧಾನದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಬೀಚ್ ಬಳಿ ಇರುವ ಮಾಜಿ ಸಿಎಂ (ಎಂಜಿಆರ್) ಸಮಾಧಿ ಸಮೀಪವೇ ಜಯಲಲಿತಾ ಅವರ ಪಾರ್ಥಿವ ಶರೀರವನ್ನೂ ಸಮಾಧಿ

ಚೆನ್ನೈ: ಎಂಜಿಆರ್ ಸ್ಮಾರಕದಲ್ಲೇ ಜಯಲಲಿತಾ ಸಮಾಧಿಗೆ ನಿರ್ಧಾರ
ಜಯಲಲಿತಾ
Published On :
ಚೆನ್ನೈ: ಮರೀನಾ ಬೀಚ್ ಸಮೀಪ ಇರುವ ಮಾಜಿ ಸಿಎಂ ಎಂಜಿಆರ್ ಸಮಾಧಿ ಸಮೀಪವೇ ಜಯಲಲಿತಾ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದ್ದು, ಜಯಲಲಿತಾ ಪಾರ್ಥಿವ ಶರೀರವನ್ನು ಮರೀನಾ ಬೀಚ್ ಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿದೆ. 
ಜಯಲಲಿತಾ ಅವರ ಅಂತ್ಯಕ್ರಿಯೆ ವಿಧಾನದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಬೀಚ್ ಬಳಿ ಇರುವ ಮಾಜಿ ಸಿಎಂ ಎಂಜಿ ರಾಮಚಂದ್ರನ್ (ಎಂಜಿಆರ್) ಸಮಾಧಿ ಸಮೀಪವೇ ಜಯಲಲಿತಾ ಅವರ ಪಾರ್ಥಿವ ಶರೀರವನ್ನೂ ಸಮಾಧಿ ಮಾಡಲು ನಿರ್ಧರಿಸಲಾಗಿದೆ.
ಜಯಲಲಿತಾ ನಿಧನದ ನಂತರ ಅವರಿಗೆ ದಹನ ಕ್ರಿಯೆಯ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೋ ಅಥವಾ ಸಮಾಧಿ ಮಾಡುವ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲಾಗುತ್ತದೋ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಈಗಾಗಲೇ ಎಂಜಿಆರ್ ಸಮಾಧಿ ಸಮೀಪ ಸಮಾಧಿ ನಿರ್ಮಿಸಲಾಗಿದ್ದು ಕೆಲವೇ ಕ್ಷಣಗಳಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರ ಮರೀನಾ ಬೀಚ್ ಗೆ ಆಗಮಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.