ಸಮತೋಲನ ಕಳೆದುಕೊಂಡ ಯುದ್ಧ ನೌಕೆ: 14 ನಾವಿಕರು ಪ್ರಾಣಾಪಾಯದಿಂದ ಪಾರು, 2 ನಾಪತ್ತೆ
ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್ಎಸ್ ಬೆಟ್ವಾ ಸಮತೋಲನ ಕಳೆದುಕೊಂಡು ಮಗುಚಿರುವ ಘಟನೆಯೊಂದು ಸೋಮವಾರ ನಡೆದಿದೆ...

ಮುಂಬೈ: ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್ಎಸ್ ಬೆಟ್ವಾ ಸಮತೋಲನ ಕಳೆದುಕೊಂಡು ಮಗುಚಿರುವ ಘಟನೆಯೊಂದು ಸೋಮವಾರ ನಡೆದಿದೆ.
ಇಂದು ಮಧ್ಯಾಹ್ನ 1.50ರ ಸುಮಾರಿಗೆ ಘಟನೆ ನಡೆದಿದೆ. ಯುದ್ಧ ನೌಕೆಯಲ್ಲಿ ಸಣ್ಣಪುಟ್ಟ ದುರಸ್ತಿಗಳು ಇದ್ದ ಕಾರಣ ದುರಸ್ಥಿಯನ್ನು ಸರಿಪಡಿಸಿ ಸಮುದ್ರಕ್ಕೆ ಬಿಡಲಾಗಿತ್ತು. ಸಮುದ್ರಕ್ಕೆ ಇಳಿದ ಕೆಲವೇ ನಿಮಿಷಗಳಲ್ಲಿ ಹಡಗು ಕಟ್ಟೆಯ ಬಳಿಯೇ ಬೆಟ್ವಾ ಯುದ್ಧ ನೌಕೆಯ ಸಮತೋಲನವನ್ನು ಕಳೆದುಕೊಂಡು ಒಂದು ಭಾಗಕ್ಕೆ ಸರಿದು ಮಗುಚಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಾಕ್ ಬ್ಲಾಕ್ ನಲ್ಲಿ ತಾಂತ್ರಿಕ ದೋಷಗಳು ಕಂಡ ಬಂದ ಹಿನ್ನಲೆಯಲ್ಲಿ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಯುದ್ಧ ನೌಕೆಯ ಒಂದು ಭಾಗ ಮಗುಚಿದ ಪರಿಣಾಮ ನೌಕೆಯಲ್ಲಿದ್ದ 14 ಮಂದಿ ನಾವಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇಬ್ಬರು ಯೋಧರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ನಾಪತ್ತೆಯಾಗಿರುವ ಯೋಧರಿಗಾಗಿ ಇದೀಗ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದೆಂದೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ಈ ರೀತಿಯೆ ಘಟನೆ ನಡೆಸಿರುವುದು ಇದೇ ಮೊದಲಾಗಿದ್ದು, ಘಟನೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಘಟನೆ ವೇಳೆ ಇಬ್ಬರು ಯೋಧರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯೋಧರಿಗಾಗಿ ಈಜು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದಾರೆಂದು ನೌಕಾ ಮುಖ್ಯಸ್ಥ ಪ್ರೊ.ಡಿ.ಕೆ. ಶರ್ಮಾ ಅವರು ತಿಳಿಸಿದ್ದಾರೆ.
ಸ್ವದೇಶಿ ನಿರ್ಮಿತ ನೌಕೆಯಾಗಿರುವ ಬೆಟ್ವಾ ಯುದ್ಧ ನೌಕೆಯು ಎರಡು ಪ್ರಮುಖ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಲಾಗಿತ್ತು. ಕ್ಯಾಕ್ಟಸ್ ಮತ್ತು ಸುಕೂನ್ ಎಂಬ ಎರಡು ಪ್ರಮುಖ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಬೆಟ್ವಾ ಯುದ್ಧ ನೌಕೆ 3850 ಟನ್ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


