ಅಕ್ರಮ ಹಣ ವರ್ಗಾವಣೆ: ಇಬ್ಬರು ಬ್ಯಾಂಕ್ ಮ್ಯಾನೇಜರ್ ಗಳ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಇಬ್ಬರು ಆಕ್ಸಿಕ್ ಬ್ಯಾಂಕ್...

Published On :
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಇಬ್ಬರು ಆಕ್ಸಿಕ್ ಬ್ಯಾಂಕ್ ಮ್ಯಾನೇಜರ್ ಗಳನ್ನು ಬಂಧಿಸಿದ್ದು, ಅವರಿಂದ ಮೂರು ಕೆ.ಜಿ.ಬಂಗಾರದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಇಬ್ಬರು ಮ್ಯಾನೇಜರ್ ಗಳ ವಿರುದ್ಧ ನವೆಂಬರ್ 30ರಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಇಬ್ಬರು ಬ್ಯಾಂಕ್ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಬ್ಯಾಂಕ್ ಅಧಿಕಾರಿಗಳ ಪರೋಕ್ಷ ಒಪ್ಪಿಗೆ ಪಡೆದು ಹಳೆ ನೋಟ್ ಗಳನ್ನು ಪರಿವರ್ತಿಸುತ್ತಿದ್ದರು.
ಶೆಲ್ ಕಂಪನಿಗಳಿಗೆ ಹಾಗೂ ಆ ಕಂಪನಿಯ ಸಣ್ಣ ಕಾರ್ಮಿಕ ಮತ್ತು ನಿರ್ದೇಶಕ ಸೇರದಂತೆ ವ್ಯಕ್ತಿಗತವಾಗಿ ಹಲವು ಜನಕ್ಕೆ ಆರ್ ಟಿಜಿಎಸ್ ಮೂಲಕ ಭಾರಿ ಮೊತ್ತದ ಹಣ ವರ್ಗಾವಣೆ ಮಾಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತರನ್ನು ಆಕ್ಸಿಸ್ ಬ್ಯಾಂಕ್ ಕಾಶ್ಮೀರ್ ಗೇಟ್ ಶಾಖೆಯಲ್ಲಿ ಮ್ಯಾನೇಜರ್ ಗಳಾಗಿ ಕೆಲಸ ಮಾಡುತ್ತಿದ್ದ ಶೋಬಿತ್ ಸಿನ್ಹಾ ಹಾಗೂ ವಿನೀತ್ ಗುಪ್ತಾ ಎಂದು ಗುರುತಿಸಲಾಗಿದೆ. ನೋಟ್ ನಿಷೇಧದ ನಂತರ ಬ್ಯಾಂಕ್ ಉನ್ನತ ಅಧಿಕಾರಿಗಳನ್ನು ಬಂಧಿಸಿದ್ದು ಇದೇ ಮೊದಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಾರಿ ನಿರ್ದೇಶನಾಲಯEDಅಕ್ರಮ ಹಣ ವರ್ಗಾವಣೆarrests 2 bank managersmoney launderingಇಬ್ಬರು ಬ್ಯಾಂಕ್ ಮ್ಯಾನೇಜರ್ ಗಳ ಬಂಧನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


