ಉಗ್ರರ ಕುಟುಂಬಸ್ಥರಿಗೆ ಕಿರುಕುಳ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರಿಗೆ ಎಚ್ಚರಿಕೆ
ಉಗ್ರರ ಕುಟುಂಬಸ್ಥರಿಗೆ ಕಿರುಕುಳ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರಿಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಜಾಕೀರ್ ರಶೀದ್ ...

ಶ್ರೀನಗರ: ಉಗ್ರರ ಕುಟುಂಬಸ್ಥರಿಗೆ ಕಿರುಕುಳ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರಿಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಜಾಕೀರ್ ರಶೀದ್ ಎಚ್ಚರಿಕೆ ನೀಡಿದ್ದಾನೆ.
ಒಂದು ನಿಮಿಷ 25 ಸೆಕಂಡ್ಸ್ ವಿಡಿಯೋ ಬಿಡುಗಡೆ ಮಾಡಿರುವ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರರ ಕುಟುಂಬಗಳಿಗೆ ಕಿರುಕುಳ ನೀಡಿ ಪೊಲೀಸರು ದೊಡ್ಡ ತಪ್ಪು ಮಾಡಿದ್ದಾರೆ. ಇದಕ್ಕೆ ಪ್ರತೀಕಾರವನ್ನು ಅನುಭವಿಸಲೇಬೇಕು ಎಂದು ಆತ ಎಚ್ಚರಿಕೆ ನೀಡಿದ್ದಾನೆ.
ಯುದ್ದ ನಡೆಯುತ್ತಿರುವುದು ನಮ್ಮ ಮತ್ತು ನಿಮ್ಮ ಮಧ್ಯೆ, ಇದರಲ್ಲಿ ಕುಟುಂಬಸ್ಥರನ್ನು ಎಳೆದು ತರಬಾರದೆಂದು ಆತ ಆಗ್ರಹಿಸಿದ್ದಾನೆ. ಜುಲೈ 8 ರಂದು ಕಾಶ್ಮೀರದಲ್ಲಿ 21 ವರ್ಷದ ಉಗ್ರ ಬುಹ್ರಾನ್ ವನಿ ಯನ್ನು ಕೊಲ್ಲಲಾಗಿತ್ತು. ಇದಾದ ನಂತರ ಸುಮಾರು 4 ತಿಂಗಳ ಕಾಲ ಕಾಶ್ಮೀರದಲ್ಲಿ ಸುಮಾರು 94 ಮಂದಿಯನ್ನು ಕೊಲ್ಲಲಾಗಿತ್ತು. 13 ಸಾವಿರ ಮಂದಿ ಗಾಯಗೊಂಡಿದ್ದು, 8 ಸಾವಿರ ಮಂದಿಯನ್ನು ಬಂಧಿಸಲಾಗಿದೆ.
ಇದು ನಿಮ್ಮ ಮೊದಲ ತಪ್ಪು ಎಂದು ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಉಗ್ರರ ಕುಟುಂಬಸ್ಥರಿಗೆ ಕಿರುಕುಳ ಮುಂದುವರಿಸಿದರೇ ಅದನ್ನು ಸಹಿಸಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


