ದೇಶ

500 ರುಪಾಯಿಯಲ್ಲಿ ಮದುವೆ, 48 ಗಂಟೆಯೊಳಗೆ ಕೆಲಸಕ್ಕೆ ಆಂಧ್ರ ಐಎಎಸ್ ಅಧಿಕಾರಿಣಿ ಹಾಜರ್

ಇತ್ತೀಚೆಗಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ತಮ್ಮ ಮಗಳ ಮದುವೆಗಾಗಿ 500 ಕೋಟಿ ರುಪಾಯಿ ವೆಚ್ಚ ಮಾಡಿದ್ದರು. ಇದರ ನಡುವೆ ಅಪರೂಪವೆಂಬಂತೆ...

500 ರುಪಾಯಿಯಲ್ಲಿ ಮದುವೆ, 48 ಗಂಟೆಯೊಳಗೆ ಕೆಲಸಕ್ಕೆ ಆಂಧ್ರ ಐಎಎಸ್ ಅಧಿಕಾರಿಣಿ ಹಾಜರ್
ಆಶಿಶ್ ವಸಿಷ್ಠ-ಸಲೋನಿ ಸಿದಾನ
Published On :
ಹೈದರಾಬಾದ್: ಇತ್ತೀಚೆಗಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ತಮ್ಮ ಮಗಳ ಮದುವೆಗಾಗಿ 500 ಕೋಟಿ ರುಪಾಯಿ ವೆಚ್ಚ ಮಾಡಿದ್ದರು. ಇದರ ನಡುವೆ ಅಪರೂಪವೆಂಬಂತೆ ಆಂಧ್ರದ ಐಎಎಸ್ ಅಧಿಕಾರಿಯೊಬ್ಬರು ಬರೀ 500 ರುಪಾಯಿಯಲ್ಲಿ ಸರಳ ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವಿಜಯವಾಡದ ಉಪ ಜಿಲ್ಲಾಧಿಕಾರಿ ಡಾ. ಸಲೋನಿ ಸಿದಾನ ಎಂಬುವರು ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಆಶಿಶ್ ವಸಿಷ್ಠ ಎಂಬುವರನ್ನು ಸೋಮವಾರ ವಿವಾಹವಾಗಿದ್ದರು. ಭಿಂಡ್ ಹೆಚ್ಚುವರಿ ಜಿಲ್ಲಾ ಕೋರ್ಟ್ ನಲ್ಲಿ 500 ರುಪಾಯಿ ಶುಲ್ಕ ನೀಡಿ ಸರಳ ಮದುವೆಯಾಗಿದ್ದರು. 
ಇದೀಗ ಮದುವೆಯಾಗಿ 48 ಗಂಟೆಯೊಳಗೆ ವಿಜಯವಾಡಕ್ಕೆ ಹಿಂತಿರುಗಿ ಕರ್ತವ್ಯಕ್ಕೆ ಹಾಜರಾಗಿರುವ 27ರ ಹರೆಯದ ಸಲೋನಿ ಸಹೋದ್ಯೋಗಿಗಳಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲೋನಿ ಮದುವೆ ಎಂಬುದು ಖಾಸಗಿ ಸಂಗತಿ. ನಾವು ಮೊದಲೇ ಸರಳ ವಿವಾಹವಾಗಬೇಕೆಂದು ನಿರ್ಧರಿಸಿದ್ದು ಅಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.