ದೇಶ

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯನ್ನು ದೊಣ್ಣೆಯಿಂದ ಬಡಿದು ಕೊಂದ ಭಗ್ನ ಪ್ರೇಮಿ

ನುಂಗಂಬಕ್ಕಂ ರೇಲ್ವೆ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಇಂತಹದೆ ಪ್ರಕರಣವೊಂದು ಕರೂರ್...

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯನ್ನು ದೊಣ್ಣೆಯಿಂದ ಬಡಿದು ಕೊಂದ ಭಗ್ನ ಪ್ರೇಮಿ
ವಿದ್ಯಾರ್ಥಿನಿ ಕೊಲೆ
Published On :

ಕರೂರ್: ನುಂಗಂಬಕ್ಕಂ ರೇಲ್ವೆ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಇಂತಹದೆ ಪ್ರಕರಣವೊಂದು ಕರೂರ್ ನಲ್ಲಿ ನಡೆದಿದೆ.

ಕರೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಶಿವಗಂಗಾ ಜಿಲ್ಲೆಯ ಮನಮಧುರೈ ಮೂಲದ 19 ವರ್ಷದ ಸೋನಾಲಿಯನ್ನು ಅದೇ ಕಾಲೇಜಿನ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದ 22 ವರ್ಷದ ಉದಯ್ ಕುಮಾರ್ ದೊಣ್ಣೆಯಿಂದ ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾನೆ.

ಉದಯ್ ಕುಮಾರ್ ಸೋನಾಲಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅಲ್ಲದೆ ಪದೇ ಪದೇ ಆಕೆಗೆ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾನೆ. ಆದರೆ ಇದಕ್ಕೆ ಸೊಪ್ಪು ಹಾಕದ ಸೋನಾಲಿ ಇದ್ದ ತರಗತಿಗೆ ನುಗ್ಗಿ ದೊಣ್ಣೆಯಿಂದ ಥಳಿಸಿದ್ದಾನೆ.

ಸೋನಾಲಿ ಮೇಲೆ ಹಲ್ಲೆ ನಡೆಸುವಾಗ ಅಲ್ಲೆ ಇದ್ದ ಶಿಕ್ಷಕ ಸತೀಶ್ ಕುಮಾರ್ ಉದಯ್ ನನ್ನು ತಡೆದಿದ್ದಾರೆ. ಈ ವೇಳೆ ಶಿಕ್ಷಕರ ಕೈಗಳಿಗೂ ಗಾಯಗಳಿವೆ. ಥಳಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಸೋನಾಲಿಯನ್ನು ಆಸ್ಪತ್ರೆಗೆ ದಾಖಲಿಸಿದರು ತೀವ್ರ ಗಾಯಗಳಿಂದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಉದಯ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.