ಡಿಡಿ ಛಾಯಾಗ್ರಾಹಕನನ್ನು ಅಪಾಯದಿಂದ ರಕ್ಷಿಸಿದ ಮೋದಿ ಸಮಯ ಪ್ರಜ್ಞೆ!
ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಪ್ರಜ್ಞೆ ದೂರದರ್ಶನದ ಛಾಯಾಗ್ರಾಹಕನ ಜೀವವನ್ನು ಉಳಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಪ್ರಜ್ಞೆ ದೂರದರ್ಶನದ ಛಾಯಾಗ್ರಾಹಕನ ಜೀವವನ್ನು ಉಳಿಸಿದೆ.
ಗುಜರಾತ್ ನ ಅಜಿ-3 ಅಣೆಕಟ್ಟಿನಿಂದ ನೀರು ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕ್ರಮದ ವರದಿ ಮಾಡುತ್ತಿದ್ದ ಛಾಯಾಗ್ರಾಹಕರತ್ತ ನೀರು ರಭಸದಿಂದ ಹರಿದು ಬರುತ್ತಿದ್ದದ್ದನ್ನು ಗಮನಿಸಿದ್ದಾರೆ. ಆದರೆ ಪತ್ರಕರ್ತರಿಗೆ ಮಾತ್ರ ಇದರ ಬಗ್ಗೆ ಸುಳಿವಿರಲಿಲ್ಲ, ತಕ್ಷಣವೇ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಕ್ಯಾಮರಾಗಳಿಂದ ಪಕ್ಕಕ್ಕೆ ಸರಿಯುವಂತೆ ಡಿಡಿ ಛಾಯಾಗ್ರಾಹಕನಿಗೆ ಸೂಚನೆ ನೀಡಿದ್ದಾರೆ.
ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಪತ್ರಕರ್ತರತ್ತ ನೀರು ಹರಿದುಬರುತ್ತಿದ್ದದ್ದನ್ನು ಗಮನಿಸದೆ ಇದ್ದಿದ್ದರೆ ಕಾರ್ಯಕ್ರಮದ ವರದಿ ನೀಡುತ್ತಿದ್ದ ಛಾಯಾಗ್ರಾಹಕ ನೀರಿನಲ್ಲಿ ಕೊಚ್ಚಿ ಹೋಗಿರುತ್ತಿದ್ದರು ಎಂದು ಘಟನೆಯನ್ನು ವಿವರಿಸಿರುವ ಗುಜರಾತ್ ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ. ಪ್ರಧಾನಿ ಸರಿಯಾದ ಸಮಯದಲ್ಲಿ ಸೂಚನೆ ನೀಡಿದ್ದಕ್ಕೆ ಪಕ್ಕಕ್ಕೆ ಸರಿದ ಪತ್ರಕರ್ತರು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


