ದೇಶ

ಭಾರತಕ್ಕೆ ಬರಲಿದೆ ಅಮೆರಿಕದ ಚಾಲಕರಹಿತ ಯುದ್ಧ ವಿಮಾನ "ಡ್ರೋಣ್" ತಂತ್ರಜ್ಞಾನ!

ಪ್ರಸ್ತುತ ತಾಲಿಬಾನ್ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.

ಭಾರತಕ್ಕೆ ಬರಲಿದೆ ಅಮೆರಿಕದ ಚಾಲಕರಹಿತ ಯುದ್ಧ ವಿಮಾನ "ಡ್ರೋಣ್" ತಂತ್ರಜ್ಞಾನ!
ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ಹಾಗೂ ಪರಿಕ್ಕರ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಪ್ರಸ್ತುತ ತಾಲಿಬಾನ್ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.

ಈ ಹಿಂದೆ 2015ರಲ್ಲಿ ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಮಂಡಳಿ ಸದಸ್ಯತ್ವಕ್ಕಾಗಿ ಸದಸ್ಯತ್ವ ಸಲ್ಲಿಸಿತ್ತಾದರೂ 2016ರಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ. ಹೀಗಾಗಿ ಭಾರತ ಇದೀಗ  ಅಮೆರಿಕದ ಚಾಲಕರಹಿತ ಯುದ್ಧ ವಿಮಾನ "ಡ್ರೋಣ್" ತಂತ್ರಜ್ಞಾನ ಪಡೆಯುವ ಅರ್ಹತೆ ಹೊಂದಿದ್ದು, ಇದೇ ಕಾರಣಕ್ಕೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಅಮೆರಿಕದಿಂದ  ಡ್ರೋಣ್ ತಂತ್ರಜ್ಞಾನ ಪಡೆಯುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲ್ಲಿದ್ದಾರೆ.

ಇದೇ ಭಾನುವಾರ ಅಮೆರಿಕ ಪ್ರವಾಸಕ್ಕೆ ಹೊರಡಲಿರುವ ಮನೋಹರ್ ಪರಿಕ್ಕರ್ ಅವರು ಪ್ರವಾಸದಲ್ಲಿ ಅಮೆರಿಕ ರಕ್ಷಣಾ ಸಚಿವ ಆ್ಯಷ್ಟನ್ ಕಾರ್ಟರ್ ರನ್ನು ಭೇಟಿ ಮಾಡಿ, ಈ ಬಗ್ಗೆ ಬೇಡಿಕೆ  ಮುಂದಿಡಲಿದ್ದಾರೆ. ಉಭಯ ನಾಯಕರಿಗೆ ಇದು 6ನೇ ಭೇಟಿಯಾಗಿದ್ದು, ಈ ಹಿಂದೆಯೂ ಕೂಡ ಪರಿಕ್ಕರ್ ಡ್ರೋಣ್ ತಂತ್ರಜ್ಞಾನ ಪಡೆಯುವ ಕುರಿತು ಮಾತುಕತೆ ನಡೆಸಿದ್ದರಾದರೂ, ಈ ಬಗ್ಗೆ  ಸ್ಪಷ್ಟನಿಲುವಿಗೆ ಬರುವಲ್ಲಿ ಉಭಯ ದೇಶಗಳ ವಿಫಲವಾಗಿದ್ದವು. ಈ ಹಿನ್ನಲೆಯಲ್ಲಿ ಪ್ರಸ್ತುತ ಪರಿಕ್ಕರ್ ಅವರ ಅಮೆರಿಕ ಪ್ರವಾಸ ಭಾರಿ ಕುತೂಹಲ ಮೂಡಿಸಿದ್ದು, ಪ್ರಸ್ತುತ ಪ್ರವಾಸದಲ್ಲಿ ಈ ಬಹು  ನಿರೀಕ್ಷಿತ ಒಪ್ಪಂದಕ್ಕೆ ಪರಿಕ್ಕರ್ ತಾರ್ಕಿಕ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಡ್ರೋಣ್ ತಂತ್ರಜ್ಞಾನ ಪಡೆಯುವ ನಿಟ್ಟಿನಲ್ಲಿ ಪರಿಕ್ಕರ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಅಲ್ಲದೆ ಒಪ್ಪಂದ ಸಂಬಂಧ ಉಭಯ ದೇಶಗಳ  ಅಧಿಕಾರಿಗಳು ಕರಡನ್ನು ಕೂಡ ಸಿದ್ಧಪಡಿಸಿಕೊಂಡಿದ್ದು, ಉಭಯ ದೇಶಗಳ ನಾಯಕ ಸಹಿಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ. ಪರಿಕ್ಕರ್ ಅಮೆರಿಕ ಪ್ರವಾಸದ ವೇಳೆ ಒಪ್ಪಂದ ಕುರಿತ  ಪೂರ್ವಾಪರ ಚರ್ಚೆಗಳು ನಡೆಯಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಅಮೆರಿಕದ ರಕ್ಷಣಾ ಸಚಿವ ಆ್ಯಷ್ಟನ್ ಕಾರ್ಟರ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಧಿಕೃತವಾಗಿ ಈ  ಬಹು ನಿರೀಕ್ಷಿತ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಭಾರತಕ್ಕೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಮಂಡಳಿಯ ಸದಸ್ಯತ್ವ ದೊರೆತ ಬೆನ್ನಲ್ಲೇ ಅತ್ಯಾಧುನಿಕ ಡ್ರೋಣ್ ತಂತ್ರಜ್ಞಾನ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನೆರೆಯ ಚೀನಾ  ಹಾಗೂ ಪಾಕಿಸ್ತಾನ ರಾಷ್ಟ್ರಗಳಿಗೆ ತಲೆನೋವು ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.