ಇಸ್ರೋದಿಂದ ಸ್ಕ್ರ್ಯಾಮ್ ಜೆಟ್ ರಾಕೆಟ್ ಎಂಜಿನ್ ನ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ಎಂಜಿನ್ ಇಂಧನವನ್ನು ಉರಿಸಲು ವಾತಾವರಣದ ಆಮ್ಲಜನಕವನ್ನು ಬಳಸುವ ಸ್ವದೇಶಿ ನಿರ್ಮಿತ ಸ್ಕ್ರ್ಯಾಮ್ ಜೆಟ್ ರಾಕೆಟ್ ನ ಪರೀಕ್ಷಾರ್ಥ ಉಡಾವಣೆಯನ್ನು...

Published On :
ಚೆನ್ನೈ: ಎಂಜಿನ್ ಇಂಧನವನ್ನು ಉರಿಸಲು ವಾತಾವರಣದ ಆಮ್ಲಜನಕವನ್ನು ಬಳಸುವ ಎಂಜಿನ್ ಆದ ಉಪಗ್ರಹ ಉಡಾವಣೆ ವೆಚ್ಚ ಕಡಿಮೆ ಮಾಡುವ, ಸ್ವದೇಶಿ ನಿರ್ಮಿತ ಸ್ಕ್ರ್ಯಾಮ್ ಜೆಟ್ ನ ಪರೀಕಾರ್ಥ ಉಡಾವಣೆಯನ್ನು ಭಾನುವಾರ ಇಸ್ರೋ ಯಶಸ್ವಿಯಾಗಿ ಪೂರೈಸಿದೆ.
ಆಂಧ್ರ ಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಸ್ಕ್ರ್ಯಾಮ್ ಜೆಟ್ ಎಂಜಿನ್ ಇಂದು ಪರೀಕ್ಷಾರ್ಥ ಉಡಾವಣೆಗೊಂಡಿತು.
ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದೆ. ಎರಡು ಸ್ಕ್ರ್ಯಾಮ್ ಜೆಟ್ ಎಂಜಿನ್ ಗಳನ್ನು ಪರೀಕ್ಷೆ ನಡೆಸಲಾಗಿದೆ. 3 ಸಾವಿರದ 277 ಕಿಲೋ ಭಾರದ ರಾಕೆಟ್ ವಿಮಾನದ ಒಳಗೆ ಅದು 55 ಸೆಕೆಂಡುಗಳ ಕಾಲ ಉರಿದು 320 ಕಿಲೋ ಮೀಟರ್ ದೂರದಲ್ಲಿರುವ ಬಂಗಾಲಕೊಲ್ಲಿ ಸಮುದ್ರಕ್ಕೆ ಪತನಗೊಂಡಿತು. 6 ಸೆಕೆಂಡುಗಳ ಕಾಲ ಪರೀಕ್ಷಾರ್ಥ ಪರೀಕ್ಷೆ ನಡೆಸಲಾಯಿತು. ಅತ್ಯಂತ ಕಡಿಮೆ ಅವಧಿಯ ಪ್ರಯೋಗ ಎಂದು ಇಸ್ರೋದ ಮುಖ್ಯಸ್ಥ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.
ರಾಕೆಟ್ ವಿಮಾನದ ವಾತಾವರಣ ಹಂತದಲ್ಲಿ ಮಾತ್ರ ಇದನ್ನು ಬಳಸಲಾಗುತ್ತಿದ್ದು, ವಾತಾವರಣದ ಆಮ್ಲಜನಕವನ್ನು ಇಂಧನ ಉರಿಯುವಿಕೆಗೆ ಬಳಸುವುದರಿಂದ ಉಡ್ಡಯನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇಸ್ರೋದ ಮರುಬಳಕೆ ಉಡ್ಡಯನ ವಾಹಕಕ್ಕೆ ಶಬ್ದಾತೀತ ವೇಗದಲ್ಲಿ ವಿದ್ಯುತ್ ಪೂರೈಸಲು ಕೂಡ ಸ್ಕ್ರ್ಯಾಮ್ ಜೆಟ್ ಎಂಜಿನ್ ನ್ನು ಬಳಸಲಾಗುತ್ತದೆ.
ರಾಕೆಟ್ ನಲ್ಲಿ ಆಮ್ಲಜನಕ ಹೊತ್ತೊಯ್ಯುವ ಸಾಮರ್ಥ್ಯವಿರುವುದರಿಂದ ಒಟ್ಟು ರಾಕೆಟ್ ನ ಭಾರ ಹಾಗೂ ಗಾತ್ರ ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚು ತೂಕದ ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ಯಬಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


