ಪೊಲೀಸಪ್ಪನ ಹೊಟ್ಟೆಯಲ್ಲಿದ್ದ 40 ಚಾಕು ತೆಗೆದ ಭಾರತೀಯ ವೈದ್ಯ!
ಪೊಲೀಸ್ ಕಾನ್ ಸ್ಟೇಬಲ್ ಹೊಟ್ಟೆಯಲ್ಲಿದ್ದ 40 ಚಾಕುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿರುವ ಆಘಾತಕಾರಿ ಘಟನೆ ಪಂಜಾಬ್ ನಲ್ಲಿ ನಡೆದಿದೆ...

ನವದೆಹಲಿ : ಪೊಲೀಸ್ ಕಾನ್ ಸ್ಟೇಬಲ್ ಹೊಟ್ಟೆಯಲ್ಲಿದ್ದ 40 ಚಾಕುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿರುವ ಆಘಾತಕಾರಿ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಅಮೃತಸರದ ಪೊಲೀಸ್ ಸುರ್ಜೀತ್ ಸಿಂಗ್ ಹೊಟ್ಟೆಯಲ್ಲಿ 40 ಚಾಕುಗಳಿದ್ದೂ ಆತ ಬದುಕುಳಿದಿದ್ದಾನೆ. 40 ಚಾಕುಗಳು ಅವರ ಹೊಟ್ಟೆಯಲ್ಲಿ ಹೇಗೆ ಸೇರಿದವು ಎಂಬ ಕುತೂಹಲ ಎಲ್ಲರಿಗೂ ಆಗಬಹುದು. ಸುರ್ಜೀತ್‌ಗೆ ಹಲವು ವರ್ಷಗಳಿಂದ ಚಾಕು ತನ್ನುವ ಚಟ ಇದೆ. ಇವರು 2 ತಿಂಗಳಲ್ಲಿ ಇವರು ಸುಮಾರು 28 ಚಾಕುಗಳು ತಿಂದಿದ್ದರು. ಈ ಮೊದಲು ತಿಂದಿದ್ದ ಎಲ್ಲಾ ಚಾಕುಗಳನ್ನು ಸೇರಿ ಒಟ್ಟು 40 ಚಾಕುಗಳು ಆತನ ಹೊಟ್ಟೆಯಲ್ಲಿದ್ದವು.
ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು 40 ಚಾಕುಗಳನ್ನು ಹೊರತೆಗೆದಿದ್ದಾರೆ. ಅಷ್ಟೊಂದು ಚಾಕುಗಳನ್ನು ಹೊರತೆಗೆದ ಬಳಿಕವೂ ಅವರು ಬದುಕುಳಿದಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಸುರ್ಜೀತ್ ಆಸ್ಪತ್ರೆಗೆ ಬಂದಿದ್ದರು. ಆಗ ಅಲ್ಟ್ರಾಸೌಂಡ್ ಸ್ಕಾನ್ ಮಾಡಿದಾಗ ಹೊಟ್ಟೆಯಲ್ಲಿ ಲೋಹ ಇರುವುದು ಪತ್ತೆಯಾಯಿತು. ರೋಗಿಯನ್ನು ವಿಚಾರಿಸಿದಾಗ, ಆವರಿಗೆ ಚಾಕು ತಿನ್ನುವ ಚಟ ಇದೆ ಎಂದು ತಿಳಿಯಿತು.
42 ವರ್ಷದ ಸುರ್ಜೀತ್ ಸಿಂಗ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸದ್ಯ ಅವರಿಗೆ ಕೌನ್ಸೆಲಿಂಗ್ ಮಾಡಿ ಗುಣಪಡಿಸಲಾಗಿದೆ ಎಂದು ವೈದ್ಯಕು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


