ದೇಶ

ಖತಾರ್ ಶಿಪ್ಪಿಂಗ್ ಕಂಪನಿಗೆ 100 ಕೋಟಿ ದಂಡ ವಿಧಿಸಿದ ಎನ್ ಜಿಟಿ

ತೈಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖತಾರ್ ಮೂಲದ ಶಿಪ್ಪಿಂಗ್ ಕಂಪೆನಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್​ಜಿಟಿ) ಮಂಗಳವಾರ...

ಖತಾರ್ ಶಿಪ್ಪಿಂಗ್ ಕಂಪನಿಗೆ 100 ಕೋಟಿ ದಂಡ ವಿಧಿಸಿದ ಎನ್ ಜಿಟಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ತೈಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖತಾರ್ ಮೂಲದ ಶಿಪ್ಪಿಂಗ್ ಕಂಪೆನಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್​ಜಿಟಿ) ಮಂಗಳವಾರ 100 ಕೋಟಿ ರುಪಾಯಿ ದಂಡ ವಿಧಿಸಿದೆ. ಇದೇ ಪ್ರಕರಣದಲ್ಲಿ ಅದನಿ ಎಂಟರ ಪ್ರೖೆಸಸ್ ಲಿಮಿಟೆಡ್​ಗೂ ಎನ್​ಜಿಟಿ 5 ಕೋಟಿ ರುಪಾಯಿ ದಂಡ ವಿಧಿಸಿದೆ.
ಗುಜರಾತಿನ ಅದನಿ ಥರ್ಮಲ್ ಘಟಕಕ್ಕೆ ಕಲ್ಲಿದ್ದಲು ತಂದಿದ್ದ ಸರಕು ಸಾಗಣೆ ಹಡಗು 2011ರ ಆಗಸ್ಟ್ 4ರಂದು ದಕ್ಷಿಣ ಮುಂಬೈ ತೀರದಿಂದ 20 ನಾಟಿಕಲ್ ಮೈಲು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳಗಿತ್ತು. ಹಡಗಿನಿಂದ ಸೋರಿಕೆಯಾದ ತೈಲದಿಂದ ಸಮುದ್ರದ ನೀರು ಮಲಿನಗೊಂಡು ಸಹಸ್ರಾರು ಜಲಚರಗಳ ಸಾವು ಸಂಭವಿಸಿತ್ತು. ಪನಾಮಾ ನೋಂದಣಿಯ ಎಂವಿ ರಾಕ್ ಹಡಗಿನಲ್ಲಿ 60,000 ಟನ್ ಇಂಡೋನೇಷ್ಯ ಕಲ್ಲಿದ್ದಲನ್ನು ಅದನಿ ಎಂಟರ್ ಪ್ರೖೆಸಸ್ ಲಿಮಿಟೆಡ್​ಗಾಗಿ ಸಾಗಿಸಲಾಗುತ್ತಿತ್ತು.
ಪರಿಸರ ಹಾನಿಯನ್ನು ತುಂಬಿಕೊಡಲು ಈ ವರ್ಷ ಜನವರಿಯಲ್ಲಿ ಎನ್​ಜಿಟಿ 25 ಕೋಟಿ ರುಪಾಯಿಗಳ ದಂಡ ವಿಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.