ದೇಶ

ದೆಹಲಿ: ಶಾಲಾ ವಾಹನದ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು

ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆಯೊಂದು ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮಂಗಳವಾರ...

ದೆಹಲಿ: ಶಾಲಾ ವಾಹನದ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು
ಅಪಘಾತದಲ್ಲಿ ಮೃತಪಟ್ಟ 3 ವರ್ಷದ ಬಾಲಕ
Published On :

ನವದೆಹಲಿ: ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆಯೊಂದು ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಅಭಿರಾಲ್ (3) ಸಾವನ್ನಪ್ಪಿದ ಬಾಲಕ. ಇಂದು ಮಧ್ಯಾಹ್ನ ಶಾಲೆಯಿಂದ ಮಗುವನ್ನು ಕರೆತಂದಿದ್ದ ಶಾಲಾ ವಾಹನವು ಮಗುವನ್ನು ಮನೆಯ ಹತ್ತಿರ ಬಿಟ್ಟಿತ್ತು. ನಂತರ ಮಗುವನ್ನು ಗಮನಿಸದೆಯೇ ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಮಗು ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಮಗುವನ್ನು ಮನೆಯ ಬಳಿ ಬಿಟ್ಟ ಚಾಲಕ ಬೇಗ ಹೋಗಬೇಕೆಂಬ ತರಾತುರಿಯಲ್ಲಿದ್ದ. ಮಗುವನ್ನು ಬಿಟ್ಟ ಕೂಡಲೇ ಆತನನ್ನು ಗಮನಿಸದೆಯೇ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಚಕ್ರವು ಮಗುವಿನ ಮೇಲೆ ಹರಿಯಿತು. ಘಟನೆಗೆ ಚಾಲಕನೇ ಜವಾಬ್ದಾರಿಯಾಗಿದ್ದಾನೆಂದು ಮಗುವಿನ ತಂದೆ ಹೇಳಿಕೊಂಡಿದ್ದಾರೆ.

ಈ ಹಿಂದೆ ಕೂಡ ವಾಹನವನ್ನು ನಿಧಾನವಾಗಿ ಓಡಿಸುವಂತೆ ತಿಳಿಸಿದ್ದೆ. ಆದರೆ, ನನ್ನ ಮಾತನ್ನು ಕೇಳದೆ ವೇಗವಾಗಿ ಓಡಿಸುತ್ತಿದ್ದ. ಆತನ ನಿರ್ಲಕ್ಷ್ಯವೇ ಇಂದು ನನ್ನ ಮಗು ಸಾವನ್ನಪ್ಪಲು ಕಾರಣ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.