ದೇಶ

ಲೈಂಗಿಕ ದುರ್ಬಳಕೆ ಭ್ರಷ್ಟಾಚಾರಕ್ಕೆ ಸಮ: ಸಂಸದೀಯ ಸಮಿತಿಯ ಹೊಸ ಕಾನೂನು

ಲೈಂಗಿಕತೆಗೆ ಒಲವು ಬಯಸುವುದನ್ನು ಲಂಚ ಎಂದು ಪರಿಗಣಿಸಬಹುದಾಗಿದ್ದು, ಅಂಥವರಿಗೆ ಶಿಕ್ಷೆ...

ಲೈಂಗಿಕ ದುರ್ಬಳಕೆ ಭ್ರಷ್ಟಾಚಾರಕ್ಕೆ ಸಮ: ಸಂಸದೀಯ ಸಮಿತಿಯ ಹೊಸ ಕಾನೂನು
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಲೈಂಗಿಕ ಸುಖ ಬಯಸುವುದನ್ನು ಲಂಚ ಎಂದು ಪರಿಗಣಿಸಬಹುದಾಗಿದ್ದು, ಅಂಥವರಿಗೆ ಶಿಕ್ಷೆ ವಿಧಿಸಬಹುದು ಎಂದು ಸಂಸದೀಯ ಸಮಿತಿ ಶಿಫರಸು ಮಾಡಿದ ಉದ್ದೇಶಿತ ಹೊಸ ಮಸೂದೆಯಲ್ಲಿ ಹೇಳಲಾಗಿದೆ.
ರಾಜ್ಯಸಭೆಯ ಸಮಿತಿ ತನ್ನ ಹೊಸ ಭ್ರಷ್ಟಾಚಾರ ತಡೆ ಮಸೂದೆ ಕುರಿತ ವರದಿಯಲ್ಲಿ, ಕಾನೂನು ಆಯೋಗದ ವರದಿಯನ್ನು ಅನುಸರಿಸಿ ಉದ್ದೇಶಿತ ಶಾಸನದಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ಕೆಲಸ ಮಾಡಿಕೊಡಲು ಜನರಿಂದ ಲಂಚ ಕೇಳಿದರೆ ಮತ್ತು ಸ್ವೀಕರಿಸಿದರೆ ಅದು ಅಪರಾಧವಾಗುತ್ತದೆ. ಇನ್ನು ಲಂಚ ನೀಡುವವರು ಕೂಡ ಅಪರಾಧಿಗಳೆಂದು ಪರಿಗಣಿಸಲ್ಪಡುತ್ತಾರೆ. ಅಲ್ಲದೆ ಯಾರನ್ನಾದರೂ ಲೈಂಗಿಕ ಸುಖಕ್ಕೆ ಬಳಸಿಕೊಳ್ಳಲು ಯತ್ನಿಸಿದರೆ ಅದು ಕೂಡ ಅಪರಾಧವಾಗುತ್ತದೆ ಎಂದು ಹೇಳಿದೆ.
ಲಂಚದ ವ್ಯಾಖ್ಯಾನವನ್ನು ವಿಸ್ತರಿಸಿರುವ ಸಮಿತಿ, ಖಾಸಗಿ ವಲಯಗಳಲ್ಲಿ ಲಂಚ ಸ್ವೀಕರಿಸುವುದನ್ನು ಕೂಡ ಸೇರಿಸಿದೆ. ಕೇಂದ್ರ ಸರ್ಕಾರ, ಭ್ರಷ್ಟಾಚಾರ ವಿರೋಧಿ(ತಿದ್ದುಪಡಿ) ಮಸೂದೆ 2013ನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಸಂಸದೀಯ ಸಮಿತಿ ನೀಡಿರುವ ವರದಿ ಮಹತ್ವ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.