ದೇಶ

ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಬಳಿ ಹಣವಿಲ್ಲ: ಅರವಿಂದ ಕೇಜ್ರಿವಾಲ್

ರಾಜಧಾನಿ ದೆಹಲಿಯ ಆಡಳಿತಾರೂಢ ಸರ್ಕಾರ ಆಮ್ ಆದ್ಮಿ ಪಕ್ಷದ ಬಳಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹಣವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್...

ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಬಳಿ ಹಣವಿಲ್ಲ: ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (ಸಂಗ್ರಹ ಚಿತ್ರ)
Published On :

ಪಣಜಿ: ರಾಜಧಾನಿ ದೆಹಲಿಯ ಆಡಳಿತಾರೂಢ ಸರ್ಕಾರ ಆಮ್ ಆದ್ಮಿ ಪಕ್ಷದ ಬಳಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹಣವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಆಪ್ ಸದಸ್ಯರೊಂದಿಗೆ ಗೋವಾದಲ್ಲಿ ಮಾತುಕತೆ ನಡೆಸಿರುವ ಅವರು, ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಆದರೆ, ಆಪ್ ಬಳಿ ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಹಣವಿಲ್ಲ. ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಬೇಕಿದ್ದರೆ ನನ್ನ ಬ್ಯಾಂಕ್ ಅಕೌಂಟಿನ ಮಾಹಿತಿಯನ್ನು ನೀಡುತ್ತೇನೆ. ಪಕ್ಷದಲ್ಲಿಯೂ ಕೂಡ ಹಣವಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ದೆಹಲಿಯಲ್ಲಿ ಚುನಾವಣೆಗೆ ನಿಂತಾಗ ಜನತೆಯೇ ನಮ್ಮೊಂದಿಗೆ ಹೋರಾಡಿದ್ದರು. ರಾಜ್ಯ ಜನತೆಯು ತಮ್ಮ ಮುಂದಿನ ಭವಿಷ್ಯ ನಿರ್ಮಾಣಕ್ಕಾಗಿ ಹೋರಾಡಲು ಆಪ್ ಪಕ್ಷವೊಂದು ವೇದಿಕೆಯಾಗಿದೆ. ಸ್ಥಳೀಯ ಜನರಿಗೆ ಆಪ್ ಪಕ್ಷ ಬ್ಯಾಂಕ್ ಆಗಿದೆ.

ಇದೇ ವೇಳೆ ಗೋವಾದಲ್ಲಿ ಮಾದಕದ್ರವ್ಯ ಮಾರಾಟ ಕುರಿತಂತೆ ಪ್ರತಿಕ್ರಿಯೆ ನೀಡಿರುವ, ಮಾದಕದ್ರವ್ಯಗಳ ಮಾರಾಟವನ್ನು ಸ್ಥಗಿತಗೊಳಿಸಬೇಕೆಂದು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದೇ ಆದರೆ, ಮುಂದಿನ 1 ಗಂಟೆಗಳಲ್ಲಿ ಮಾದಕದ್ರವ್ಯಗಳ ಮಾರಾಟವನ್ನು ಸ್ಥಗಿತಗೊಳಿಸಬಹುದು. ನಕ್ಸಲರು, ಪೊಲೀಸರು ಹಾಗೂ ರಾಜಕೀಯ ಗಣ್ಯರು ಮಾದಕದ್ರವ್ಯಗಳು ಜೀವಂತವಾಗಿರುವಂತೆ ಮಾಡುತ್ತಿದ್ದಾರೆ. ಪೊಲೀಸರನ್ನು ಬಳಸಿಕೊಂಡು ರಾಜಕೀಯ ವ್ಯಕ್ತಿಗಳು ಹಣವನ್ನು ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.